ಬೊಮ್ಮನಹಳ್ಳಿ ಶಾಸಕರ ಮೊದಲ ಸಭೆ

ಬೊಮ್ಮನಹಳ್ಳಿ ಶಾಸಕರ ಮೊದಲ ಸಭೆ

ಬೆಂಗಳೂರು: ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು ಮೊಟ್ಟ ಮೊದಲ ಸಭೆಯನ್ನು ನಿಯೋಜಿಸಿದರು.

ಈ ಸಭೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ವಲಯದ BBMP ಕಚೇರಿಯಲ್ಲಿ, ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳ‌ ಕುರಿತು ಅಧಿಕಾರಿಗಳಿಗೆ ಮಹತ್ವವಾದ ಸೂಚನೆಗಳನ್ನು ನೀಡಿದರು.

ಮ್ಯಾನ್ ಹೋಲ್ ಹಾಗೂ ಒಳಚರಂಡಿ ರಾಜಕಾಲುವೆಯನ್ನು ಸರಿಪಡಿಸುವಂತೆ ರಸ್ತೆಗಳ ಮೂಲಭೂತ ಸೌಕರ್ಯಕ್ಕೆ ಸಂಬಂದಿಸಿದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಇನ್ನುಈ ಸಭೆಯಲ್ಲಿ ಮತಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡು ವೇಗ ಕಳೆದುಕೊಂಡಿರುವ ಕಾಮಗಾರಿಗಳ ಬಗ್ಗೆ ವಿಚಾರಿಸಿ ಆ ಕಾಮಗಾರಿಗಳ ಪ್ರಗತಿಯ ವಿಚಾರದಲ್ಲಿ ಉಂಟಾಗಿರುವ ತೊಂದರೆಗಳನ್ನು ಪರಿಹರಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ರವರು ಬಿಬಿಎಂಪಿ ಮುಖ್ಯ ಅಭಿಯಂತರರು, ಮಳೆ ನೀರು ಕಾಲುವೆಯ ಮುಖ್ಯ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related