ಬಾಲಕಿ ಶವವಾಗಿ ಪತ್ತೆ

ಬಾಲಕಿ ಶವವಾಗಿ ಪತ್ತೆ

ವಿಜಯಪುರ : ಇಂಡಿ ತಾಲೂಕಿನ ಬೋಳೆಗಾಂವ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲೆ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಆ. 9 ರಂದು ಗ್ರಾಮದ ಹಣಮಾನ ದೇವಸ್ಥಾನದ ಆವರಣದಲ್ಲಿ ಆಟ ಆಡುತ್ತಿರುವ ಇಬ್ಬರು ಬಾಲೆಯರ ಪೈಕಿ ಒಬ್ಬ ಸಹೋದರಿ ಕಾಣೆಯಾಗಿದ್ದಳು. ಆದರೆ ಅಪಹರಣ ಬಾಲೆ ಬೋಳೆಗಾಂವ ಗ್ರಾಮ ಸಮೀಪದ ಕುಡಿಯುವ ನೀರಿನ ಟ್ಯಾಂಕ್ ಹತ್ತಿರ ಶವವಾಗಿ ಪತ್ತೆಯಾಗಿದ್ದಾಳೆ.

ಸುದ್ದಿ ತಿಳಿದ ತಕ್ಷಣ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಸಿಪಿಐ ಹಾಗೂ ಹೊರ್ತಿ ಠಾಣೆ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ತನಿಖೆ ಮುಂದುವರಿಸಿದ್ದಾರೆ.

Related