ಬಿಜೆಪಿ ಶಾಸಕನ ಮೇಲೆ ಎಫ್‌ಐಆ‌ರ್ ದಾಖಲು

ಬಿಜೆಪಿ ಶಾಸಕನ ಮೇಲೆ ಎಫ್‌ಐಆ‌ರ್ ದಾಖಲು

ಬೆಂಗಳೂರು: ಮಾಜಿ ಸಚಿವ ಹಾಗೂ  ಬಿಜೆಪಿ ಶಾಸಕ ಮುನಿರತ್ನ ಅವರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಲೇ ಇರುತ್ತಾರೆ.

ಕಳೆದ ಆರು ತಿಂಗಳ ಹಿಂದೆ ಬಿಜೆಪಿಯ ಶಾಸಕ ಮುನಿರತ್ನ ಅವರಿಗೆ ಮಹಿಳೆಯೊಬ್ಬರು ಹನಿಟ್ರ್ಯಾಪ್‌ ಆರೋಪದ ಮೇಲೆ ಸುದ್ದಿಯಾಗಿದ್ದರು.

ಇದರ ಬೆನ್ನಲ್ಲೇ ಮತ್ತೆ ಇದೀಗ ಮಾಜಿ ಸಚಿವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಎಫ್ ಆರ್ ದಾಖಲಾಗಿದೆ.

ಹೌದು, ಬಿಜೆಪಿಗೆ ಕಾಂಗ್ರೆಸ್‌ ಕಾರ್ಯಕರ್ತನನ್ನು ಬೆದರಿಸಿ ಸೇರ್ಪಡೆಗೊಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಲಕ್ಷ್ಮೀದೇವಿ ನಗರದ ಪೇಂಟರ್ ಸ್ಯಾಮ್ಯುಯಲ್‌ ಆರೋಪ ಮಾಡಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಮುನಿರತ್ನ ಹಾಗೂ ಅವರ ಬೆಂಬಲಿಗರಾದ ಸುರೇಶ್, ವಸಂತ್, ವಾಸೀಂ ಹಾಗೂ ಸೀನ ವಿರುದ್ಧ ಅಪಹರಣ ಆರೋಪದಡಿ ಪೊಲೀಸರು ಎಫ್ ಐಆರ್‌ ದಾಖಲಿಸಿದ್ದಾರೆ.

ಎರಡು ದಿನಗಳಿಂದ ಮಾತನಾಡುವ ನೆಪದಲ್ಲಿ ಶಾಸಕ ಮುನಿರತ್ನ ಅವರ ಕಚೇರಿಗೆ ಬಲವಂತವಾಗಿ ಶಾಸಕರ ಹಿಂಬಾಲಕರು ಕರೆದು ಕೊಂಡುಹೋಗಿ ಬೆದರಿಕೆ ಹಾಕಿ ಬಿಜೆಪಿ ಸೇರಿಸಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪವನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ.

 

Related