ಮೂರು ಮಕ್ಕಳನ್ನು ಕೊಂದ ತಂದೆ!

ಮೂರು ಮಕ್ಕಳನ್ನು ಕೊಂದ ತಂದೆ!

ಅತ್ಯಂತ ಭಯಾನಕ ಎನ್ನುವ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕಾಲುವೆ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹರಿಯಾಣಧ ಕರ್ನಲ್ ಜಿಲ್ಲೆಯ ನಲಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸುಶೀಲ್ ಕುಮಾರ್ ಎಂಬಾತ ಇಂಥದ್ದೊಂದು ಹೀನ ಕೃತ್ಯವನ್ನು ಎಸಗಿದ್ದಾನೆ. ತನ್ನ 3. 5 ಹಾಗೂ 8 ವರ್ಷದ ಮೂವರು ಮಕ್ಕಳನ್ನು ಕಾಲುವೆಗೆ ತಳ್ಳಿದ್ದಾನೆ.

ಕಳೆದ ಸೋಮವಾರ ಮನೆಯಿಂದ ಕಾಣೆಯಾಗಿದ್ದ ಮಕ್ಕಳಿಗಾಗಿ ಮಕ್ಕಳ ತಾಯಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಎಲ್ಲೂ ಸಿಗಲಿಲ್ಲ. ಈ ಮಧ್ಯೆಯೇ ಮನೆಗೆ ಬಂದ ಗಂಡ ತಾನು ಮಾಡಿರುವ ಕೃತ್ಯದ ಬಗ್ಗೆ ಹೆಂಡತಿಗೆ ತಿಳಿಸಿದ್ದಾನೆ. ಮೂವರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಕಾಲುವೆಗೆ ತಳ್ಳಿದ್ದಾನೆ.

ಪೊಲೀಸರು ಸುಶೀಲ್‌ನನ್ನು ಬಂಧಿಸಿ ಬಾಯಿ ಬಿಡಿಸಿದಾಗ ತನ್ನ ಪತ್ನಿಗೆ ಅಕ್ರಮ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ತಮ್ಮಿಬ್ಬರ ನಡುವೆ ಜಗಳವಾಗುತ್ತಿತ್ತು. ಆಕೆಯ ಮೇಲಿನ ಸೇಡಿನಿಂದಾಗಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಕ್ಕಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕುಂಜ್ಪುರ ಪೊಲೀಸ್ ಠಾಣೆ ಸ್ಟೇಷನ್ ಹೌಸ್ ಆಫೀಸರ್ ಮುನೀಶ್ ಕುಮಾರ್ ತಿಳಿಸಿದ್ದಾರೆ.

Related