ಭ್ರಷ್ಟ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಭ್ರಷ್ಟ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ರಾಮದುರ್ಗ : ಉಪ ಮುಖ್ಯಮಂತ್ರಿಗಳು ಪ್ರವಾಹ ಸಂತ್ರಸ್ತರ ಮನೆಗಳ ಮತ್ತೊಮ್ಮೆ ಸರ್ವೆ ಮಾಡಿ ಕಳುಹಿಸಲು ಹೇಳಿದರೂ ತಹಶೀಲ್ದಾರ್ ಯಾವುದೇ ಕ್ರಮ ತಗೆದುಕೊಂಡಿಲ್ಲ. ಭ್ರಷ್ಟ ಅಧಿಕಾರಿಗಳ ತಾಲೂಕಿನಿಂದ ಹೊರಹಾಕಿದಾಗ ಮಾತ್ರ ಜನರಿಗೆ ಸೌಲಭ್ಯಗಳು ದೊರೆಯುತ್ತವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶ್ರೀ ಶಶಿಕಾಂತ ಪಡಸಲಗಿ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ಸ್ಥಳೀಯ ಮಿನಿ ವಿಧಾನಸೌಧದಲ್ಲಿ ಮುಂದೆ ನಿರಾಶ್ರಿತರಿಗೆ ನೆರವು ರೈತ ಸಂಘಟನೆಗಳ ಮುಖಾಂತರ ನಡೆದ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ, ಇಲ್ಲಿ ಎಲ್ಲರೂ ಭ್ರಷ್ಟ ಅಧಿಕಾರಿಗಳಿದ್ದಾರೆ. ಎಂದು ಸಾಮಾನ್ಯ ರೈತನ ಕೆಲಸಕ್ಕೆ ಲಂಚ ನೀಡಬೇಕು. ಇಂತಹವರನ್ನು ಮೊದಲು ತೆಗೆದು ಹಾಕಬೇಕು ಇಲ್ಲವಾದರೆ ಎಲ್ಲರಿಗೂ ಅನ್ಯಾಯವಾಗುತ್ತದೆ. ರಾಜಕೀಯ ನಾಯಕರು ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಮಾತನಾಡಿ, ಬೆಳಗಾವಿಯ ರಾಮದುರ್ಗ ತಾಲೂಕಿನಲ್ಲಿ ಪ್ರವಾಹದಿಂದ 774 ಮನೆಗಳು ಲಾಗಿನ ಆಗಬೇಕಿದೆ. ಈಗಾಗಲೆ ಏಳು ಗ್ರಾಮಗಳು ಸ್ಥಳಾಂತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

Related