ನುಗ್ಗೆಕಾಯಿ ಬೆಳೆದು ಲಾಭ ಪಡೆದ ರೈತ

ನುಗ್ಗೆಕಾಯಿ ಬೆಳೆದು ಲಾಭ ಪಡೆದ ರೈತ

ರಾಯಚೂರು : ದೇವದುರ್ಗ ತಾಲೂಕಿನ ಗಲಗ ಗ್ರಾಮದ ಹಬೀಬ್‌ಪಾಷ ಎಂಬ ರೈತ ಒಂದು ಎಕರೆ ಹೊಲದಲ್ಲಿ ನುಗ್ಗೆಕಾಯಿ ಬೆಳೆದು ಸಾವಿರಾರು ರೂಪಾಯಿಗಳ ಲಾಭವನ್ನು ಪಡೆದು ರೈತರಿಗೆ ಮಾದರಿಯಾಗಿದ್ದಾನೆ.

ಗಲಗ ಗ್ರಾಮದ ರೈತ ಹಬೀಬ್‌ಪಾಷ ಓದಿದ್ದು 10ನೇ ತರಗತಿವರೆಗೆ ಮಾತ್ರ ಜೀವನ ಸಾಗಿಸಲಿಕ್ಕೆ ಒಂದು ಸಣ್ಣ ಕಿರಾಣಿ ಅಂಗಡಿ ಮಾಡಿಕೊಂಡು ಉಪ ಜೀವನವನ್ನು ಸಾಗಿಸುತ್ತಿದ್ದ ಒಂದು ದಿನ ದೇವದುರ್ಗದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಕೃಷ್ಣರವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಸಹಾಯದೊಂದಿಗೆ ನುಗ್ಗೆಕಾಯಿ ಬೆಳೆಸುವ ಬಗ್ಗೆ ಸಮಗ್ರಮಾಹಿತಿ ಪಡೆದುಕೊಂಡು, ತೋಟದಲ್ಲಿ ತೆರೆದ ಬಾವಿಯಲಿದ್ದ ನೀರನ್ನು ಉಪಯೋಗಿಸಲು ಸುಮಾರು 8 ಸಾವಿರ ರೂಗಳನ್ನು ಖರ್ಚುಮಾಡಿ ನುಗ್ಗೆ ಮರಕ್ಕೆ ಹನಿ ನೀರಾವರಿಯನ್ನು ಅಳವಡಿಸಿದ್ದಾರೆ.

ತೋಟಗಾರಿಗೆ ಇಲಾಖೆಯ ವತಿಯಿಂದ ಒಂದು ಎಕರೆಯಲ್ಲಿ ನುಗ್ಗೆ ಮರಗಳನ್ನು ಹಾಕಲಿಕ್ಕೆ ಅಗೆದ ತೆಗ್ಗುಗಳಿಗೆ ಸಹಾಯ ಧನವನ್ನಾಗಿ ಎಕರೆಗೆ 35 ಸಾವಿರ ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

Related