ಪ್ರತಿಭಟನೆಯಲ್ಲಿ ರೈತ ಆತ್ಮಹತ್ಯೆ

ಪ್ರತಿಭಟನೆಯಲ್ಲಿ ರೈತ ಆತ್ಮಹತ್ಯೆ

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವ ರೈತನೊಬ್ಬ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಡಿ. 18ರಂದು ದೆಹಲಿ ಗಡಿಯ ಸಮೀಪ ರೈತ ಪ್ರತಿಭಟನಾ ಸ್ಥಳದಿಂದ ಮರಳಿದ್ದ 22 ವರ್ಷದ ಪಂಜಾಬ್ ರೈತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪಂಜಾಬ್ ರಾಜ್ಯದ ಬತಿಂಡಾ ಜಿಲ್ಲೆಯ ದಯಾಲ್‌ಪುರ ಮಿರ್ಜಾ ಗ್ರಾಮದ ನಿವಾಸಿ ಗುರ್ಲಭ್ ಸಿಂಗ್ ಎಂದು ಗುರುತಿಸಿದರು.

ಕಳೆದ ಶುಕ್ರವಾರ ಮನೆಗೆ ಮರಳಿದ್ದ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ ಸೇವನೆ ಮಾಡಿದ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದರು.

ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಣ್ಣ ರೈತರಾಗಿದ್ದ ಸಿಂಗ್ ಸುಮಾರು ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬಶಂಕೆ  ವ್ಯಕ್ತವಾಗಿರುವುದಾಗಿ ಪೊಲೀಸರು ಹೇಳಿದರು.

Related