ಪಡುಪೆರಾರದಲ್ಲಿ ಕುಟುಂಬಗಳ ಪರದಾಟ!

ಪಡುಪೆರಾರದಲ್ಲಿ ಕುಟುಂಬಗಳ ಪರದಾಟ!

ವಿಜಯಪುರ : ವಿಜಯಪುರದ ಇಂಡಿ ತಾಲೂಕಿನ 2 ಕುಟುಂಬ ಸರಂಜಾಮುಗಳ ಜತೆಗೆ ಪೆರಾರಕ್ಕೆ ಬಂದಿದ್ದವು.

ಕಳೆದ ಮಾರ್ಚ್ ತಿಂಗಳು, ಪೆರಾರ ಜಾತ್ರೆಯ ಸಮಯ. ಊರೂರಿನ ಜಾತ್ರೆಗಳಲ್ಲಿ ರಾಟೆ ತೊಟ್ಟಿಲು, ಡ್ರ‍್ಯಾಗನ್ ರೈಲು ಕಟ್ಟಿ ಬದುಕು ಕಟ್ಟಿಕೊಳ್ಳುವ ಅಷ್ಟರಲ್ಲಿ ಕೊರೊನಾ ಕಾಲಿರಿಸಿತು, ಲಾಕ್‌ಡೌನ್ ಜಾರಿಯಾಯಿತು. ಅಲ್ಲಿಂದೀಚೆಗೆ ಈ ಎರಡು ಕುಟುಂಬ ಇಲ್ಲಿರಲಾಗದೆ, ಹುಟ್ಟೂರಿಗೆ ಹೋಗಲಾಗದೆ ಪಡುಪೆರಾರದಲ್ಲಿ ಕಾಲ ಕಳೆಯುತ್ತಿವೆ. ಬದುಕು ಜಾತ್ರೆ ಮುಗಿದ ಬಳಿಕದ ರಾಟೆ ತೊಟ್ಟಿಲಿನಂತೆ ಸ್ಥಗಿತವಾಗಿದೆ.

ಇಂಡಿ ತಾಲೂಕಿನ ಹಲ್ಲಳ್ಳಿ ಇವರ ಊರು. ಎರಡು ಕುಟುಂಬಗಳಲ್ಲಿ ಗಂಡಸರು, ಮಹಿಳೆಯರು, ನಾಲ್ವರು ಮಕ್ಕಳ ಸಹಿತ ಒಟ್ಟು 13 ಮಂದಿ ಇದ್ದಾರೆ. ಲಾಕ್‌ಡೌನ್ ಆರಂಭವಾದ ದಿನದಿಂದ ಇಂದಿನ ವರೆಗೆ ಪಡುಪೆರಾರದಲ್ಲಿ ಉಳಿದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಷ್ಟರಲ್ಲಿ ಲಾಕ್‌ಡೌನ್ ಜಾರಿಯಾಯಿತು. ಲಾಕ್‌ಡೌನ್ ಸಮಯ ಒಂದು ತಿಂಗಳ ಕಾಲ ಪೆರಾರ ದೈವ-ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪಡುಪೆರಾರ ಗ್ರಾ.ಪಂ. ಇವರ ಊಟೋಪಹಾರ ನೋಡಿಕೊಂಡು ರಕ್ಷಿಸಿವೆ. ಊರಿನ ಜನರು, ದಾನಿಗಳು, ಪೊಲೀಸರು ಕೂಡ ಸಹಾಯಹಸ್ತ ಚಾಚಿದ್ದಾರೆ.

Related