ಸ್ಮಶಾನದ ಸಮಸ್ಯೆ ಬಗೆಹರಿಯುವ ನಿರೀಕ್ಷೆ

ಸ್ಮಶಾನದ ಸಮಸ್ಯೆ ಬಗೆಹರಿಯುವ ನಿರೀಕ್ಷೆ

ಕೊಟ್ಟೂರು : ತಾಲೂಕಿನ ಕೆ.ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪರದಹಳ್ಳಿ ಗ್ರಾಮದ ಸ್ಮಶಾನದ ಸಮಸ್ಯೆಯ ಬಗ್ಗೆ ಬುಧವಾರ ತಹಶೀಲ್ದಾರ್ ಎಂ ಕುಮಾರ್ ಸ್ವಾಮಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಮಶಾನ ದಾರಿಯು ಕೇಸರು ಗದ್ದೆಯಂತೆ ಇದೆ. ಹಾಗೂ ಸ್ಮಶಾನದಲ್ಲಿ ಗಿಡ ಗಂಟೆಗಳು ಬೆಳೆದಿದ್ದು. ಹಳ್ಳದ ಪಕ್ಕದಲ್ಲಿದೆ. ಹೀಗಾಗಿ ಆ ಸ್ಮಶಾನ ಜನರಿಗೆ ಉಪಯೋಗಕ್ಕೆ ಬರುವಂತೆ ಕಾಣುತ್ತದೆ ಎಂದರು. ಗ್ರಾಮದ ಹತ್ತಿರ ಎರಡೂ ಭೂಮಿಯನ್ನು ಗುರುತಿಸಿದ್ದಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಜಾಗ ಸ್ಮಶಾನಕ್ಕೆ ಸೂಕ್ತವಾಗಿದೆ. ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಹಾಗೂ ಜಿಲ್ಲಾಧೀಕಾರಿಗಳು ಪವನ್ ಕುಮಾರ್ ಮಲಾಪಾಟಿ ಅವರ ಗಮನಕ್ಕೆ ತಂದು ಬೇಗನೇ ಸ್ಮಶಾನ ಅನುದಾನವನ್ನು ಬಿಡುಗಡೆ ಬಗ್ಗೆ ಭರವಸೆಯನ್ನು ನೀಡಿದರು.

ಸ್ಮಶಾನ ಊರಿಂದ ದೂರದಲ್ಲಿದ್ದರೂ ಅದನ್ನು ನಾವು ಉಪಯೋಗ ಮಾಡಿಕೊಳ್ಳುತ್ತೇವೆ ಅದ್ದು ಬಸ್ತು ಮಾಡಿ ಕೊಡಬೇಕು ಎಂದು ಕೆ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಕೊಟ್ರೀಶ ಹೇಳಿದರು. ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಸ್ಮಶಾನ ಜಾಗ ಕೊಡಲು ಗ್ರಾಮದ ಭೂಮಿಯ ಅನುದಾನ ನೀಡಲು ಸಮಸ್ತ ದೈವದವರು, ಸರ್ವಜನಿಕರು ತಮ್ಮ ಆಳಲನ್ನು ತೊಡಿಕೊಂಡರು.

ಈ ಸಂದರ್ಭದಲ್ಲಿ ಸುರೇಶ್, ಅಜ್ಜಪ್ಪ , ಸಿದ್ಧಪ್ಪ, ಕರಡಿ ಲೋಕಣ್ಣ , ನೀರಗಂಟಿ ಕೊಟ್ರೇಶಿ, ಉಪ ತಹಶೀಲ್ದಾರ್ ನಾಗರಾಜ್, ಅರ್ ಐ ಹಾಲಸ್ವಾಮಿ, ಗ್ರಾಮ ಲೆಕ್ಕಾಧೀಕಾರಿ ಶಾರದಾ, ಇನ್ನಿತರರಿದ್ದರು.

Related