ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್ಗಳ ರೋಚಕ ಜಯ..

ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್ಗಳ ರೋಚಕ ಜಯ..

ಆಲ್ರೌಂಡರ್ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ಹಾಗೂ ಪಾಂಡ್ಯ ಆಲ್ರೌಂಡರ್ಆಟದಿಂದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತದ ಬೌಲರ್ಗಳಿಂದ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನ 19.5 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೂಲಕ ಭಾರತದ ಗೆಲುವಿಗೆ 148 ರನ್ಗಳ ಗುರಿ ನೀಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ನಿಗದಿತ 19.4 ಓವರ್ಗಳಲ್ಲಿ 148 ರನ್ಗಳನ್ನು ಪೇರಿಸುವ ಮೂಲಕ ಎದುರಾಳಿ ಪಾಕಿಸ್ತಾನ ಆಟಗಾರರಿಗೆ ಮಣ್ಣುಮುಕ್ಕಿಸಿತು.

ಟಾಸ್ಸೋತು ನಂತರ ಬ್ಯಾಟಿಂಗ್ಮಾಡಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಎರಡು ಎಸೆತಗಳಲ್ಲೇ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ಡಕೌಟ್ಆದರು. 2ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು ಅಬ್ಬರಿಸಿದ ವಿರಾಟ್ಕೊಹ್ಲಿ ಪಾಕ್ಬೌಲರ್ಗಳನ್ನು ಬೆಂಡೆತ್ತಿದರು.

ಉತ್ತಮ ಫಾರ್ಮ್ನಲ್ಲಿದ್ದ ವಿರಾಟ್ಕೊಹ್ಲಿ ಪಾಕ್ಬೌಲರ್ಗಳ ಬೆವರಿಳಿಸಿದರು. ಕೊಹ್ಲಿಗೆ ಜೊತೆಯಾಗಿ ಸಾಥ್ನೀಡುತ್ತಿದ್ದ ನಾಯಕ ರೋಹಿತ್ಶರ್ಮಾ 18 ಎಸೆತಗಳಲ್ಲಿ 1 ಸಿಕ್ಸರ್ನೊಂದಿಗೆ 12 ರನ್ಗಳಿಸಿದರು. ಇದೇ ವೇಳೆ ತಮ್ಮ 18ನೇ ಎಸೆತದಲ್ಲಿ ಸಿಕ್ಸರ್ಸಿಡಿಸುವ ಬರದಲ್ಲಿ ಬೌಂಡರಿ ಕ್ಯಾಚ್ನೀಡಿ ಪೆವಿಲಿಯನ್ಗೆ ಮರಳಿದರು. ನಂತರವೂ ತಮ್ಮ ದಾಳಿ ಮುಂದುವರಿಸಿದ ಕೊಹ್ಲಿ 34 ಎಸೆತಗಳಲ್ಲಿ 35 ರನ್ಸಿ ಡಿಸಿ, ವಿಕೆಟ್ಒಪ್ಪಿಸಿದರು. ಈ ಬೆನ್ನಲ್ಲೇ ಭರವಸೆಯ ಆಟಗಾರ ಸೂರ್ಯಕುಮಾರ್ಯಾದವ್18 ಎಸೆತಗಳಲ್ಲಿ 18 ರನ್ಗಳಿಸಿ ಔಟಾದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ಪಾಂಡ್ಯ ಉತ್ತಮ ಜೊತೆಯಾಟವಾಡಿದರು. ಇಬ್ಬರ ಜೊತೆಯಾಟದಿಂದ ಭಾರತ 28 ಎಸೆತಗಳಲ್ಲಿ 52 ರನ್ಗಳಿಸಿತು. ಜವಾಬ್ದಾರಿಯುತ ಆಟವಾಡಿದ ಜಡೇಜಾ 29 ಎಸೆತಗಳಲ್ಲಿ 35 ರನ್ಗಳಿಸಿದರು. ಕೊನೆಯ ಓವರ್ವರೆಗೂ ಟೀಂ ಇಂಡಿಯಾ ಗೆಲುವಿಗಾಗಿ ಸೆಣಸಾಡಿದರು. ಕೊನೆಯ 6 ಎಸೆಗಳಲ್ಲಿ 7 ರನ್ಗಳಿಸುವುದರಲ್ಲಿದ್ದ ಟೀಂ ಇಂಡಿಯಾಕ್ಕೆ ಸಿಕ್ಸರ್ಸಿಡಿಸುವ ಬರದಲ್ಲಿ ಔಟಾದರು. ಜಡೇಜಾ ಅವರಿಗೆ ಜೊತೆಯಾಗಿ ನಿಂತ ಹಾರ್ಡಿಕ್ಪಾಂಡ್ಯ ಕೇವಲ 17 ಎಸೆತಗಳಲ್ಲಿ 33 ರನ್ಸಿಡಿಸಿದರು. ಕೊನೆಯಲ್ಲಿ ವಿನ್ನಿಂಗ್ಶಾಟ್ಮೂಲಕ ಗೆಲುವು ತಂದುಕೊಟ್ಟರು.

Related