ಮಾಜಿ ಸಚಿವ ಚನ್ನಿಂಗಪ್ಪ ವಿಧಿವಶ

ಮಾಜಿ ಸಚಿವ ಚನ್ನಿಂಗಪ್ಪ ವಿಧಿವಶ

ನೆಲಮಂಗಲ, ಫೆ. 21 : ಮಾಜಿ ಅರಣ್ಯ ಸಚಿವ ಚನ್ನಿಂಗಪ್ಪ ಇಂದು ವಿಧಿವಶರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾಜಿ ಅರಣ್ಯ ಸಚಿವ ಸಿ. ಚನ್ನಿಗಪ್ಪ ಕೊನೆಯುಸಿರೆಳೆದಿದ್ದಾರೆ.
ಮಾಜಿ ಅರಣ್ಯ ಸಚಿವ ಸಿ. ಚನ್ನಿಗಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಿಗಪ್ಪ, ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದರು ವಿದೇಶದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದು ನಂತರ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ಸಾಧ್ಯತೆಯಿದೆ. ಮಾಜಿ ಸಚಿವ ಚನ್ನಿಗಪ್ಪ ಅವರು ಮೂರು ಜನ ಪುತ್ರರನ್ನು ಹೊಂದಿದ್ದಾರೆ. ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.

Related