ವಿ.ವಿ ಎಸ್ಪಿಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ

ವಿ.ವಿ ಎಸ್ಪಿಬಿ ಹೆಸರಿನಲ್ಲಿ ಸಂಗೀತ ಪೀಠ ಸ್ಥಾಪನೆ

ಮೈಸೂರು : ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಸಂಗೀತ ಪೀಠ ಸ್ಥಾಪನೆಗೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಅನುಮೋದನೆ ನೀಡಿದೆ.

ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಅವರ ಹೆಸರಿನ ಸಂಗೀತ ಪೀಠ ಪ್ರಾರಂಭವಾಗಲಿದ್ದು ಇದಕ್ಕಾಗಿ ವಾರ್ಷಿಕ ಐದು ಲಕ್ಷ ಮೀಸಲು ಇರಿಸಲಾಗುತ್ತದೆ.

ಈ ಹಣದಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ. ಗ್ರಂಥ ಪ್ರಕಟಣೆ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವಿ ಪ್ರಕಟಣೆ ಹೇಳಿದೆ.

Related