ರಸ್ತೆ ಬದಿ ಗಿಡ ನೆಟ್ಟು ಪರಿಸರ ಕಾಳಜಿ

ರಸ್ತೆ ಬದಿ ಗಿಡ ನೆಟ್ಟು ಪರಿಸರ ಕಾಳಜಿ

ತಿಪಟೂರು: ಕಲ್ಪತರು ನಾಡಿನ ಪರಿಸರ ಕಾಳಜಿವುಳ್ಳ ರೇಣುಕರಾಧ್ಯ ಮತ್ತು ಅವರ ತಂಡದವತಿಯಿಂದ ತಿಪಟೂರಿನ ಐಬಿ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೂ ಶನಿವಾರ ನೇರಳೆ, ಬೇವು, ಮಹಾಘನಿ ಗಿಡಗಳನ್ನು ತಿಪಟೂರಿನ ಬಿ ಹೆಚ್ ರಸ್ತೆಯ ಅಂಚಿನಲ್ಲಿ ನೆಡಲಾಯಿತು.

ತಿಪಟೂರಿನ ರೇಣುಕರಾಧ್ಯರು ಜನತೆಯ ಆರೋಗ್ಯಕ್ಕಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಉಪಯೋಗಿಸಿ ಬಿಸಾಡುವ ಮಾಹಾಮರಿ ಪ್ಲಾಸ್ಟಿಕನ್ನು ಸಂಪೂರ್ಣ ನಿರ್ಬಂಧ ಮಾಡಬೇಕೆಂದು ಪಣತೊಟ್ಟು ಸರಿಸುಮಾರು ಎರಡುವರೆ ವರ್ಷಗಳಿಂದ ಅವಿರತ ಪ್ರಯತ್ನದೊಂದಿಗೆ ತಿಪಟೂರಿನ ಪ್ರಕೃತಿಗೆ ಹಾಗೂ ಸಾರ್ವಜನಿಕರಿಗೆ ಆಗುವ ದುಷ್ಪಪರಿಣಾಮಗಳ ಬಗ್ಗೆ ಹರಿವು ಮುಡಿಸಲು ಕರಪತ್ರಗಳನ್ನು ಸುಮಾರು ಹತ್ತು ಸಾವಿರ ಮನೆಗಳಿಗೆ ತಮ್ಮ ತಂಡದವತಿಯಿಂದ ತೆರಳಿ ಹಂಚಿ ಜಾಗೃತಿ ಮೂಡಿಸಿದ್ದಾರೆ.

ತಿಪಟೂರಿನ ಎಲ್ಲ ಶಾಲಾ ಕಾಲೇಜುಗಳಿಗೆ ತೆರಳಿ ಎನ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಕುರಿತಾದ ಉತ್ತಮ ಮಾಹಿತಿಯನ್ನು ನೀಡಿದ್ದಾರೆ. ಇದಲ್ಲದೆ ನಗರದ ವಿವಿದೆಡೆ ಸಸಿಗಳನ್ನು ನೆಟ್ಟು ಪೋಷಿಸಿಸುವ ಕಾರ್ಯಕ್ರಮಗಳನ್ನು ನೆಡೆಸುತ್ತಿದ್ದಾರೆ ತಾಲೂಕಿನ ಜನತೆಗೆ ಉತ್ತಮ ಆರೋಗ್ಯಕ್ಕಾಗಿ ಉಚಿತ ಯೋಗ ಕಾರ್ಯಕ್ರಮಗಳನ್ನು ನೆಡೆಸುತ್ತಿರುವುದು ಶ್ಲಾಘನೀಯ.

Related