ಸಿಂಧಿ ಸಂಸ್ಥೆಯಿಂದ ಪರಿಸರ ಜಾಗೃತಿ ಅಭಿಯಾನ

ಸಿಂಧಿ ಸಂಸ್ಥೆಯಿಂದ ಪರಿಸರ ಜಾಗೃತಿ ಅಭಿಯಾನ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪರಿಸರ ಕಲುಷಿತಗೊಂಡು ಆರೋಗ್ಯದ ಮೇಲೆ ಉಂಟಾಗುತ್ತಿರುವ  ಗಂಭೀರ ಪರಿಣಾಮಗಳು ಹಾಗೂ ಇಂತಹ ಪರಿಸರದಲ್ಲೇ ಬದುಕುತ್ತಿರುವ ಬೆಂಗಳೂರಿನ ಜನತೆಗೆ ಜಾಗೃತಿ ಮೂಡಿಸಲೆಂದೇ ಸೆ. 10ರಂದು ವಾಕಥಾನ್‌ ಹಮ್ಮಿಕೊಳ್ಳಲಾಗಿದೆ ಎಂದು ಸಿಂಧಿ ಸಂಸ್ಥೆಗಳ ಸಂಸ್ಥಾಪಕ ಪ್ರಕಾಶ್ ಎಫ್.ಮಾಲ್ವಾನಿ ಅವರು ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಕೃಪಾ ರಸ್ತೆಯಲ್ಲಿರುವ ಸಿಂಧಿ ಸೇವಾ ಸಮಿತಿಯು ಪ್ರಾರಂಭವಾಗಿ 40 ವರ್ಷವಾಗಿದೆ. ಅಂದಿನಿಂದಲೂ ಇಲ್ಲಿಯ ತನಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಪರಿಸರ ಜಾಗೃತಿಗಾಗಿ ನಮ್ಮ ವಾಕಥಾನ್ ಸ್ವಚ್ಛ ಮತ್ತು ಹಸಿರು ಬೆಂಗಳೂರಿನ ಬಗ್ಗೆ ಜಾಗೃತಿ ಮೂಡಿಸುತ್ತದೆ.  ಈ ವಾಕಾತಾನ್ ನಲ್ಲಿ ಸುಮಾರು 2000 ಜನರು ಭಾಗವಾಗಲಿದ್ದಾರೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಸಂಸದ ತೇಜಸ್ವಿ ಸೂರ್ಯ, ಗೌರವಾನ್ವಿತ ಅತಿಥಿಗಳಾಗಿ  ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್,  ಸಂಚಾರಿ ಪೊಲೀಸ್ ಆಯುಕ್ತರಾದ ರವೀಕಾಂತೇ ಗೌಡ, ಪೊಲೀಸ್ ಸಂಚಾರ ಪೂರ್ವ ವಿಭಾಗದ ಉಪ ಆಯುಕ್ತರಾದ   ಶ್ರೀಮತಿ ಕಲಾ ಕೃಷ್ಣಸ್ವಾಮಿ ಮತ್ತಿತರರು  ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶನಿವಾರ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್‌ ಬ್ಯಾಂಡ್ ಸ್ಟ್ಯಾಂ ನಿಂದ ಫ್ಲಾಗ್ ಆಫ್ ಆಗಿ 4 ಕಿ.ಮೀ. ವಾಕಥಾನ್ ನಡೆಯಲಿದ್ದು, ಕುಮಾರ ಕೃಪ ಬಳಿ ಇರುವ ಸಿಂಧಿ ಹೈಸ್ಕೂಲ್‌ನಲ್ಲಿ ಮುಕ್ತಾಯವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ  ಅಲ್ಪನ ಕಾಲ, ದೇವಿಕ ಕಿರಣ್ ಉಪಸ್ಥಿತರಿದ್ದರು.

Related