ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ

ಗದಗ : ಮಕ್ಕಳಲ್ಲಿ ಜಗತ್ತಿನ ಆಗುಹೋಗುಗಳ ಬಗ್ಗೆ ಮತ್ತು ಘಟಿಸುವ ವಿಧ್ಯಮಾನಗಳ ಬಗ್ಗೆ ತುಂಬಾ ಕುತೂಹಲವಿರುತ್ತದೆ. ಅಂತಹ ಕುತೂಹಲ ಅವರಲ್ಲಿ ವೈಜ್ಞಾನಿಕ ದೃಷ್ಠಿಯಿಂದ ನೋಡುವಂತಾಗಬೇಕು. ವಿಜ್ಞಾನ ತಿಳುವಳಿಕೆ ನೀಡುವ ಮೂಲಕ  ಅವರಲ್ಲಿನ  ಪ್ರತಿಭೆಯನ್ನು  ಗುರುತಿಸಿ  ಪ್ರೋತ್ಸಾಹಿಸಿದಾಗ ಬಾಲವಿಜ್ಞಾನಿಗಳಾಗಿ ಹೊರಹೊಮ್ಮುತ್ತಾರೆ ಎಂದು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಎಸ್.ಜಿ ಸಲಗರೆ ನುಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಕರ ಬಾಲಕಿಯರ ಸರ್ಕಾರಿ ಬಾಲಮಂದಿರಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಕರ ಸರಕಾರಿ ಬಾಲಮಂದಿರದಲ್ಲಿ ಡಾ. ಅಬ್ದುಲ್‌ಕಲಾಂ ಹಾಗೂ ಕಲ್ಪನಾ ಚಾವ್ಲಾ ವಿಜ್ಷಾನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

Related