ವಿದ್ಯುತ್ ಅವಘಡ; ವ್ಯಕ್ತಿ ಸಾವು

ವಿದ್ಯುತ್ ಅವಘಡ; ವ್ಯಕ್ತಿ ಸಾವು

ಕೊಪ್ಪಳ;  ಹುಬ್ಬಳ್ಳಿಯಿಂದ ಕೊಪ್ಪಳದ ಕಡೆ ಬರುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ವಿದ್ಯುತ್ ಅವಘಡದಿಂದ ೫೨ ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಹುಬ್ಬಳ್ಳಿಯಿಂದ ಹೊರಟಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ಕೊಪ್ಪಳದ ಕಡೆ ಬರುತ್ತಿರುವ ರೈಲಿನ ಭೋಗಿಯಾದ ಎಸ್. ೩ರಲ್ಲಿ ೫೨ ವರ್ಷದ ವಿದ್ಯುತ್ ಅವಘಡದಿಂದ ಈಶಪ್ಪ ಎನ್ನುವ ವ್ಯಕ್ತಿ ಮೃತಪಟ್ಟಿದ್ದು, ಮೃತಪಟ್ಟ ಹಿನ್ನೆಲೆಯಲ್ಲಿ ರೈಲನ್ನು ಕೊಪ್ಪಳದ ವಿಧಾನದಲ್ಲಿ ಒಂದು ತಾಸು ನಿಲುಗಡೆ ಮಾಡಲಾಗಿತ್ತು.

ಮೃತ ವ್ಯಕ್ತಿ ನೋಡಿದ ರೈಲ್ವೆ ಸಿಬ್ಬಂದಿ ರೈಲ್ವೆ ಇಲಾಖೆಯ ವೈದ್ಯರಿಗೆ ಮಾಹಿತಿ ಮುಟ್ಟಿಸಿದ್ದರು. ಈ ವೇಳೆ ಶವಪರೀಕ್ಷೆ ಮಾಡಿದ ವೈದ್ಯರು ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ಕೊಪ್ಪಳದ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ.

Related