ಶಹಾಪುರ: ನಗರದ ಚರಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸುವರ್ಣಾ ಕರ್ನಾಟಕ ಗುತ್ತಿಗೆದಾರರ ಸಂಘದ ವತಿಯಿಂದ ಸರ್ವ ಸದಸ್ಯರ ಸಭೆ ಜರುಗಿತು. ಸಭೆಯ ಬಳಿಕ ಸಂಘದ ರಾಜ್ಯಧ್ಯಕ್ಷ ಜೋಗಿ ಜಯಪ್ಪ ಅವರ ಆದೇಶದ ಮೇರೆಗೆ ಚರಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಬಸವಯ್ಯ ಶರಣರ ಸಾನಿಧ್ಯದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಯಮನಪ್ಪ ಅಗಸ್ಥಾಳ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ದೇವಿಂದ್ರಪ್ಪ ಕಾಶಿರಾಜ (ಗೌರವ ಅಧ್ಯಕ್ಷ), ಸಂಗಣ್ಣ ದೊಡ್ಮನಿ (ತಾಲೂಕ ಅಧ್ಯಕ್ಷ), ಪರ್ವತರೆಡ್ಡಿ ಪೊಲೀಸ್ ಪಾಟೀಲ್ (ಉಪಾಧ್ಯಕ್ಷ), ಹಣಮಂತ್ರಾಯಗೌಡ (ಕಾರ್ಯದರ್ಶಿ), ರಮೇಶ ರಾಠೋಡ (ಖಜಾಂಜಿ), ಅಮರೇಶ ಸಜ್ಜನ್ (ಸಂಘಟನಾ ಕಾರ್ಯದರ್ಶಿ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಭಾವನಾ
ಈ ಸಂದರ್ಭದಲ್ಲಿ ಮಾಳಿಂಗರಾಯ ಮಂಡಗಳ್ಳಿ, ಬಸವರಾಜ ಏವೂರ, ಮಾಳಪ್ಪ ಕವಾತಿ, ರಾಯಪ್ಪ ಗಂಗನಾಳ, ನಾಗರಾಜ ಬಳಬಟ್ಟಿ, ಮಹೇಶ ರಸ್ತಾಪುರ, ಬಸವರಾಜ ನಾಟೇಕರ್, ಭೀಮಾಶಂಕರ ಹುಲ್ಕಲ್, ಶರಣಬಸವ ಸೈದಾಪುರ, ಶರಣು ಮೇಟಿ, ಶರಣು ಸಗರಸಾಧು, ಸುರೇಶ ಪೂಜಾರಿ, ಮಲ್ಲಿಕಾರ್ಜುನ ದೋರನಹಳ್ಳಿ, ಸಿದ್ದಣ್ಣ ದಿಗ್ಗಿ, ಭೀಮಣಗೌಡ ಗಂಗನಾಳ, ಭೀಮರಾಯ ಜುನ್ನಾ, ಸುನೀಲ್ ರಾಠೋಡ, ದೇವಿಂದ್ರಪ್ಪ ನಾಟೇಕರ್, ಬಾಪುಗೌಡ ಸಾದ್ಯಾಪುರ, ಮಾಳಪ್ಪ, ಯಂಕಣ್ಣ ಚೆನ್ನೂರ, ಶರಣು ವಿಭೂತಿಹಳ್ಳಿ ಸೇರಿದಂತೆ ಗುತ್ತಿಗೆದಾರರು ಇದ್ದರು.