ಶಿಕ್ಷಣ ಪ್ರೇಮಿ ಪಟ್ಟಮ್ಮಜ್ಜಿ

  • In State
  • March 7, 2020
  • 442 Views
ಶಿಕ್ಷಣ ಪ್ರೇಮಿ ಪಟ್ಟಮ್ಮಜ್ಜಿ

ಹಾವೇರಿ, ಮಾ.7 : ಪುಟ್ಟಮಜ್ಜಿ ಮಕ್ಕಳಿಗೆ ಪಾಠ ಪ್ರಚನ ಮಾಡುತ್ತಾ ಶಿಕ್ಷಣ ಪ್ರೇ,ಇಯಾಗಿದ್ದಾರೆ. ನಿವೃತ್ತಿಯ ನಂತರ ಜಮೀನು, ಗದ್ದೆ, ಮನೆ, ಮಕ್ಕಳು, ಮೊಮ್ಮಕ್ಕಳಿಗೆ ಸೀಮಿತ ಆಗುತ್ತಾರೆ. ಆದರೆ ಹಾವೇರಿಯ ಪುಟ್ಟಮ್ಮಜ್ಜಿ ಶಿಕ್ಷಕ ವೃತ್ತಿಯಿಂದ ಅಲ್ಪ ಹಣ,ಸಾಲ ಮಾಡಿಕೊಂಡು ಪ್ರಾಥಮಿಕ ಶಾಲೆ ಆರಂಭ ಮಾಡಿ ಬಡಮಕ್ಕಳಿಗೆ ಮಕ್ಕಳಿಗೆ ಬೋದನೆ ಮಾಡುತ್ತಿದ್ದು, ಈಗ ವಯಸ್ಸು 90 ವರ್ಷ ಆದರೂ 2 ಮತ್ತು 3ನೇ ತರಗತಿಗಳಿಗೆ ಪಾಠ ಮಾಡುತ್ತಾರೆ.
ಹೌದು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆಯ ನಿವಾಸಿ ಪುಟ್ಟಮ್ಮಜ್ಜಿಗೆ ವಯಸ್ಸು 90 ವರ್ಷಗಳಲ್ಲಿ ವಿವಿಧೆಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಪುಟ್ಟಮ್ಮಜ್ಜಿ, ನಂತರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡೋ ಸಲುವಾಗಿಯೇ 1990ರಲ್ಲಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿದ್ರು. ಅದೀಗ ಹೆಮ್ಮರವಾಗಿ ಬೆಳೆದಿದೆ. ಪುಟ್ಟಮ್ಮಜ್ಜಿ ವಯಸ್ಸಿನ ಹಂಗಿಲ್ಲದೇ ನಿತ್ಯ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ.
ಕೊಡಿಯಾಲ ಹೊಸಪೇಟೆಯಲ್ಲಿರೋ ಕೂಲಿ ಕಾರ್ಮಿಕರು, ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ರು. ಇದನ್ನು ಗಮನಿಸಿದ ಪುಟ್ಟಮ್ಮಜ್ಜಿ, ತಮಗೆ ಬರ್ತಿದ್ದ 2000ರೂ. ಪಿಂಚಣಿ ಹಣದಿಂದ ಶಾಲೆ ಶುರು ಮಾಡಿದ್ರು. ಸದ್ಯ 1-7ನೇ ತರಗತಿಗಳು ನಡೆಯುತ್ತಿದ್ದು 150ಕ್ಕೂ ಹೆಚ್ಚು ಮಕ್ಕಳು ಓದುತ್ತಿವೆ. ನಿತ್ಯ ಶಾಲೆಗೆ ಬರೋ ಪುಟ್ಟಮ್ಮಜ್ಜಿ, 2 ಮತ್ತು 3ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಹಾಡು, ನೃತ್ಯ ಹೇಳಿ ಕೊಡುತ್ತಾರೆ. ಪುಟ್ಟಮ್ಮಜ್ಜಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಭಾವಿಕಟ್ಟಿ ಹೇಳುತ್ತಾರೆ.

Related