ಶಾಸಕ ಜಮೀರ್‍ಗೆ E.D ನೋಟಿಸ್

ಶಾಸಕ ಜಮೀರ್‍ಗೆ E.D ನೋಟಿಸ್

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮತ್ತು ಮಾಜಿ ಸಚಿವ ರೋಶನ್ ಬೇಗ್ ನಿವಾಸ, ಕಚೇರಿ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಆಗಸ್ಟ್ 05 ರಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಇದೀಗ ಜಮೀರ್ ಅಹ್ಮದ್‍ಗೆ ಇ.ಡಿ ನೋಟಿಸ್ ನೀಡಿದೆ.

ಚಾಮರಾಜಪೇಟೆ ಶಾಸಕ ಜಮೀರ್‍ಗೆ ನೋಟಿಸ್ ನೀಡಿದ ಇ.ಡಿ ಅಧಿಕಾರಿಗಳು 10 ದಿನಗಳೊಳಗೆ ದಾಖಲೆಗಳನ್ನು ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ಹಿಂದೆ ಐಎಂಎ ಪ್ರಕರಣದ ನಂಟಿದೆ ಎಂದು ಕೇಳಿಬಂದಿದ್ದು, ಈ ಪ್ರಕರಣದ ಪ್ರಮುಖ ಆರೋಪಿಯಾದ ಮನ್ಸೂರ್ ವಿಚಾರಣೆಯ ವೇಳೆ ಶಾಸಕ ಜಮೀರ್ ಅಹ್ಮದ್ ಹಾಗು ರೋಶನ್ ಬೇಗ್ ಹೆಸರು ಪ್ರಸ್ತಾಪಿಸಿದ್ದ, ಇದರಿಂದ ಇ.ಡಿ ದಾಳಿ ನಡೆದಿದೆ ಎಂದು ಕೇಳಿಬಂದಿದೆ.

ದೆಹಲಿಯಿಂದ ಬಂದ 45 ಇ.ಡಿ. ಅಧಿಕಾರಿಗಳು, ಜಮೀರ್‍ನ ವಸಂತನಗರದ ನಿವಾಸ, ಬಂಬೂ ಬಜಾರ್ ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿದಂತೆ ಜಮೀರ್ ಒಡೆತನದ ಪ್ಲ್ಯಾಟ್, ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

Related