ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳದ ಡಿವೈಎಸ್‌ಪಿ ಕಚೇರಿ

ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳದ ಡಿವೈಎಸ್‌ಪಿ ಕಚೇರಿ

ಸಾವಳಗಿ :  ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಇರುವಂತಹ ಆರಕ್ಷಕರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಬೌರಮ್ಮ ಮಗದುಮ್ ಅವರ ಮೇಲೆ ಕ್ರಮಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗ ಇರುವ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಗಳನ್ನು ಉಲ್ಲಂಘನೆ ಮಾಡಿ ಹಾಗೂ ಸಾಮಾಜಿಕ ಅಂತರವಿಲ್ಲದೆ ತಮ್ಮ ಹುಟ್ಟುಹಬ್ಬವನ್ನು ಪೊಲೀಸ್ ಠಾಣಾ ಕಚೇರಿಯಲ್ಲಿಯೇ ಆಚರಣೆ ಮಾಡಿಕೊಂಡಿರುವ ಬಗ್ಗೆ 3ಏಪ್ರಿಲ್ 2021 ಡಿವೈಎಸ್ಪಿ ಕಚೇರಿಗೆ ಲಿಖಿತ ದೂರನ್ನು ದಾಖಲಿಸಲಾಗಿತ್ತು.

ಪೊಲೀಸ್ ಠಾಣಾ ಪಿಎಸ್‌ಐ ಅವರು 25 ಮಾರ್ಚ್ನಂದು ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಸಾರ್ವಜನಿಕ ಜನರನ್ನು ಹಾಗೂ ಕೆಲ ಕೇಸ್ ನಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತು ಜೈಲು ಶಿಕ್ಷೆಯನ್ನು ಅನುಭವಿಸಿದ ವ್ಯಕ್ತಿಗಳ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಎಲ್ಲಾ ಘಟನೆಯನ್ನು ಸವಿವರವಾಗಿ ಅರ್ಜಿಯನ್ನು ಮಾಡಿ ಡಿವೈಎಸ್ಪಿ ಕಚೇರಿಗೆ ದೂರು ಅರ್ಜಿಯನ್ನು ನೀಡಲಾಗಿತ್ತು. ಆದರೆ ಇದುವರೆಗೂ ಡಿವೈಎಸ್ಪಿ ಕಚೇರಿ ಜಮಖಂಡಿಯಿಂದ ಅರ್ಜಿದಾರನಿಗೆ ಯಾವುದೇ ಹಿಂಬರಹ ಬಂದಿಲ್ಲ ಎಂಬುದು ಇಲ್ಲಿ ವಿಪರ್ಯಾಸವಾಗಿದೆ. ಇಲ್ಲಿ ಡಿವೈಎಸ್ಪಿ ಕಚೇರಿ ಜಮಖಂಡಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

Related