ಚುನಾವಣಾ ಅಖಾಡದಲ್ಲಿ ಡುಬ್ಲಿಕೇಟ್ ಶಾರುಖ್ ಖಾನ್

ಚುನಾವಣಾ ಅಖಾಡದಲ್ಲಿ ಡುಬ್ಲಿಕೇಟ್ ಶಾರುಖ್ ಖಾನ್

ಸೊಲ್ಲಾಪುರದ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ( ಏಪ್ರಿಲ್ 19 ಶುಕ್ರವಾರ) ದಿಂದ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, ಇನ್ನೂ ಎರಡನೇ ಹಂತದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನದಲ್ಲಿ ತೊಡಗಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಪರವಾಗಿ ಘಟಾನುಘಟಿಗಳು ಅಂದರೆ ಸಿನಿಮಾ ರಂಗದವರು ಸೇರಿದಂತೆ ಇನ್ನಿತರ ರಂಗದಿಂದ ಬಂದು ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾರೆ. ಅದರಂತೆ ಸೊಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕಿ ಪ್ರಣಿತಿ ಶಿಂಧೆ ಕೂಡ ಶಕ್ತಿ ಶಕ್ತಿಪ್ರದರ್ಶನದಲ್ಲಿ ತೊಡಗಿದ್ದು, ಈ ಪ್ರಚಾರದ ಸಂದರ್ಭದಲ್ಲಿ ನಕಲಿ ಶಾರುಖಾನನನ್ನು ಚುನಾವಣಾ ಪ್ರಚಾರಕ್ಕೆಂದು ಕರೆತಂದಿರುವ ಪ್ರಣತಿ. ಇನ್ನು ಈ ಶಾರುಖಾನನನ್ನು ನೋಡಿ ಎಲ್ಲಾ ಜನ ಅಚ್ಚರಿಪಟ್ಟಿದ್ದಾರೆ.

ಹೌದು ಚುನಾವಣೆ  ಪ್ರಚಾರದಲ್ಲಿ ಶಾರುಖ್ ಖಾನ್ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದರು. ಪ್ರಣಿತಿ ಶಿಂಧೆಯ ಪ್ರಚಾರಕ್ಕಾಗಿ ಶಾರುಖ್ ಸ್ವತಃ ರ‍್ಯಾಲಿಯಲ್ಲಿ ಕಾಣಿಸಿಕೊಂಡಿದ್ದಾರಾ ಎಂದು ಹಲವರು ಆಶ್ಚರ್ಯ ಪಡುತ್ತಿದ್ದರು. ಅವರ ಹಾವಭಾವ ಮತ್ತು ಲುಕ್​ ನೋಡಿದರೆ ಕಿಂಗ್ ಖಾನ್‌ ಅವರಂತೆಯೇ ಇತ್ತು. ಹಾಗಾಗಿ ಎಲ್ಲರೂ ಗೊಂದಲಕ್ಕೊಳಗಾದರು. ಆದರೆ ಪ್ರಚಾರಕ್ಕಾಗಿ ಪ್ರಣಿತಿ ಶಿಂಧೆ ಅವರು ಕರೆ ತಂದಿರುವುದು ಅಪ್ಪಟ ನಕಲಿ ಶಾರುಖ್ ಖಾನ್​ನನ್ನು ಎಂಬುದು ಅಸಲಿಯತ್ತು. ಸೋಶಿಯಲ್​ ಮೀಡಿಯಾದಲ್ಲಿ ಈ ಪ್ರಚಾರ ರ‍್ಯಾಲಿಯ ವಿಡಿಯೋ ಸಖತ್​ ವೈರಲ್ ಆಗಿದೆ.

Related