444 ಕೋಟಿ ಗಳಿಸಿದ ಡಂಕಿ

444 ಕೋಟಿ ಗಳಿಸಿದ ಡಂಕಿ

ಶಾರುಖ್ ಖಾನ್ ನಟನೆಯ ಡಂಕಿ ಚಿತ್ರ ಬಿಡುಗಡೆಯ ನಂತರ ಹಲವಾರು ಸಮಸ್ಯೆಗಳನ್ನು ಎದುರಿಸಿ ಇಂದು ಗೆಲುವಿನ ನಗೆಯನ್ನು ಮೀರಿದ್ದು ಸುಮಾರು 444 ಕೋಟಿ ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿದೆ.

ಬೆಂಕಿ ಚಿತ್ರದ ಬಿಡುಗಡೆಯ ಮರು ದಿನವೇ ಪ್ರಭಾಸ್ ನಟನೆಯ ಸಲಾರ್‌ ತೆಲುಗು ಚಿತ್ರ ಬಿಡುಗಡೆಯಾಗಿದ್ದು ಇದಕ್ಕೆ ದೊಡ್ಡ ಆಘಾತ ಉಂಟು ಮಾಡಿತು. ಆದರೆ ಎಲ್ಲವನ್ನು ಹಿಂದಿಕ್ಕಿ ಈಗ ಭರ್ಜರಿ ಗೆಲುವನ್ನು ಸಾಧಿಸಿ ತನ್ನ ಗೆಲುವಿನ ಹಾದಿಯನ್ನು ಹಿಡಿದಿದೆ. 19 ದಿನಗಳ ಕಾಲ ಪ್ರದರ್ಶನ ಕಂಡಿರುವ ‘ಡಂಕಿ’ ಸಿನಿಮಾ ವಿಶ್ವಾದ್ಯಂತ ಉತ್ತಮವಾಗಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ಕಲೆಕ್ಷನ್​ 444 ಕೋಟಿ ರೂಪಾಯಿ ಆಗಿದೆ. ಈ ಮಾಹಿತಿಯನ್ನು ಸ್ವತಃ ‘ಡಂಕಿ’ ಚಿತ್ರತಂಡವೇ ಹಂಚಿಕೊಂಡಿದೆ. ಈ ಗೆಲುವಿನ ಮೂಲಕ ಶಾರುಖ್​ ಖಾನ್​ ಅವರಿಗೆ 2023ರಲ್ಲಿ ಹ್ಯಾಟ್ರಿಕ್​ ಯಶಸ್ಸು ಸಿಕ್ಕಂತೆ ಆಗಿದೆ.

 

 

Related