ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಪತ್ತೆ!

ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಪತ್ತೆ!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನಡೆಯುತ್ತಿದ್ದು ನಾಳೆ ಮತದಾನದ ದಿನವಾಗಿದ್ದು, ಇದರಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಬರದಿಂದ ಮಾಡಿಕೊಳ್ಳಲಾಗುತ್ತಿದೆ.

ಇನ್ನುಮೇ 8 ರಿಂದ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ದಾರೆ. ಇದರ ಬೆನ್ನಲೇ ಮತದಾನದ ದಿನದಂದು ನಶೆಯಲ್ಲಿ ತೇಲಾಡಲು ಮುಂದಾಗಿದ ಪುಂಡರನ್ನು ಸುಮಾರು 20 ಕೋಟಿ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೌದು, ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್‌ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಚುನಾವಣಾ ಸಂದರ್ಭದಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿರುತ್ತದೆ. ಈ ವೇಳೆ ಡ್ರಗ್ಸ್‌ ನಶೆಯಲ್ಲಿ ತೇಲುವಂತೆ ಮಾಡುವ ಡ್ರಗ್ಸ್‌ಗೆ ಭಾರಿ ಬೇಡಿಕೆ ಬರಲಿದೆ ಎಂದು ಆಲೋಚನೆ ಮಾಡಿದ್ದ ಡ್ರಗ್ಸ್‌ ಪೆಡ್ಲರ್‌ಗಳು ಮೂಟೆಗಟ್ಟಲೆ ಗಾಂಜಾ, ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಸಂಗ್ರಹಣೆ ಮಾಡಿಕೊಂಡಿದ್ದರು.

19 ಡ್ರಗ್ಸ್‌ ಪೆಡ್ಲರ್‌ಗಳನ್ನು ಪೊಲೀಸರು ಈಗಾಗಲೇ ಹೆಡೆಮುರಿಕಟ್ಟಿದ್ದು, ಅವರಿಂದ ಇಪ್ಪತ್ತು ಕೋಟಿ ರೂ. ಮೌಲ್ಯದ ನಶೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣಾ ಆಯೋಗ ನೀತಿ ಸಂಹಿತೆಯನ್ನ ಘೋಷಿಸಿದ ದಿನದಿಂದಲ್ಲೂ ಸಾಕಷ್ಟು ಚೆಕ್‌ಪೋಸ್ಟ್‌ ನಿರ್ಮಿಸಿಕೊಂಡು ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿಯೊಂದು ಪೊಲೀಸರು ಚೆಕ್‌ಪೋಸ್ಟ್‌ ನಿರ್ಮಿಸಿಕೊಂಡು ಹಣ ಪತ್ತೆ, ಮದ್ಯ ಸಾಗಣೆ ಮತ್ತು ಇತರೆ ವಸ್ತುಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿರುತ್ತಾರೆ. ಆದರೆ, ಚುನಾವಣಾ ಸಂದರ್ಭದಲ್ಲಿ ಪೊಲೀಸ್‌ ರು ಡ್ರಗ್ಸ್‌ ಮಾರಾಟದ ಮೇಲೆ ಹೆಚ್ಚಿನ ಗಮನ ಹರಿಸುವುದಿಲ್ಲ ಎಂದು ಎಗ್ಗಿಲ್ಲದೇ ಡ್ರಗ್ಸ್‌ ಸಾಗಣೆ ಮತ್ತು ಸರಬರಾಜು ಮಾಡಲು ಮುಂದಾಗಿದ್ದಾರೆ.

ಚುನಾವಣೆಗೆ ಬಿಗಿ ಪೋಲಿಸ್‌ ಭದ್ರತೆ ಯ ನಡುವೆ ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಅವಧಿಯಲ್ಲಿಯೇ ಅತ್ಯಂತ ಹೆಚ್ಚು ಡ್ರಗ್ಸ್‌ ಪೆಡ್ಲರ್‌ ಕಾರ್ಯಾಚರಣೆ ಮಾಡಿದ್ದು, 20 ಕೋಟಿ ಮೌಲ್ಯದ ಡ್ರೆಸ್ಸ್‌ ವಶಕ್ಕೆ ಪಡೆದಿದ್ದಾರೆ.

ಇನ್ನು ಬೆಂಗಳೂರಿನ ಕೊಳೆಗೇರಿಗಳಲ್ಲಿ ಹೆಚ್ಚಾಗಿ ಡ್ರಗ್ಸ್‌ ಬಳಕೆ ಆಗುತ್ತಿರುವುದು ಕಂಡುಬಂದಿದೆ. ಸ್ಲಂಗಳಲ್ಲಿ ಡ್ರಗ್ಸ್ ಬಳಕೆ ಅಗುವ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ವಿಶೇಷ ತಂಡವು, ನಗರದ ವಿವಿಧ ಕೊಳೆಗೇರಿಗಳನ್ನು ಗುರಿಯಾಗಿಸಿಕೊಂಡು 10 ಕಡೆ ಕಾರ್ಯಾಚರಣೆ ಮಾಡಲಾಗಿತ್ತು. ಒಟ್ಟು 19 ಫೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಪೆಡ್ಲರ್ಸ್ ಮೊಬೈಲ್ ಗಳ ಮೂಲಕ ಹೆಚ್ಚಿನ ಡೀಟೆಲ್ಸ್ ಕಲೆ ಹಾಕುತ್ತಿದ್ದಾರೆ.

ಬೆಂಗಳೂರಿನ ಸ್ಲಂ ಪ್ರದೇಶಗಳಾದ ಆಶೋಕನಗರ, ಕೆ.ಆರ್. ಪುರ. ಆರ್.ಟಿ.ನಗರ, ವಿಲ್ಸನ್ ಗಾರ್ಡನ್, ಬಾಣಸವಾಡಿ, ಹೆಣ್ಣೂರು, ಯಲಹಂಕ, ಪುಲಕೇಶಿಯ ನಗರದ ಸಿದ್ದಾಪುರ ಕೊಳೆಗೇರಿ ಪ್ರದೇಶಗಳಲ್ಲಿ ಕಾರ್ಯಾರಣೆ ಮಾಡಿ ಪೊಲೀಸ್‌ ರು ಡ್ರಗ್ಸ್‌ ಸೀಜ್‌ ಮಾಡಲಾಗಿದ್ದು, ಕೇಂದ್ರ ಅಪರಾಧ ವಿಭಾಗದ ಪೊಲೀಸರು ಜಪ್ತಿ ಮಾಡಿರುವ ಡ್ರಗ್ಸ್‌ ವಸ್ತುಗಳು ಮತ್ತು ಪ್ರಕರಣದ ವಿವರಗಳನ್ನು ಕೇಂದ್ರ ಚುನಾವಣೆ ಆಯೋಗಕ್ಕೆ ನೀಡಲಾಗಿದೆ.

 

Related