ಮಾದಕ ವಸ್ತು ಮಾನವ ಜನಾಂಗಕ್ಕೆ ಆಪತ್ತು: ಡಿಕೆಶಿ

ಮಾದಕ ವಸ್ತು ಮಾನವ ಜನಾಂಗಕ್ಕೆ ಆಪತ್ತು: ಡಿಕೆಶಿ

ಬೆಂಗಳೂರು: ಮಾದಕ ವಸ್ತು ಎಂಬುವುದು ಮಾನವನ ಜೀವ ಹಾನಿ ಮಾಡುವಂತಹ ವಸ್ತುವಾಗಿದ್ದರಿಂದ ಈ ಮಾದಕ ವಸ್ತುವನ್ನು ಮಾನವರಾದ ನಾವು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳುವುದರ ಜೊತೆಗೆ ಕೆಲವೊಂದು ಸಾರಿ ನಮ್ಮ ಜೀವನ ಹೋಗುವಂತಹ ಸಂದರ್ಭ ಕೂಡ ಬಂದುದಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ಅವರು ಇಂದು ʼವಿಶ್ವಮಾದಕ ವಸ್ತು ವಿರೋಧಿ’ ದಿನವಾದ ಇಂದು ಬೆಳಿಗ್ಗೆ ವಿಧಾನಸೌಧದ ಮುಂಭಾಗ ವಿದ್ಯಾರ್ಥಿಗಳಿಂದ ನಡೆದ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಬೋಧಿಸಲಾಯಿತು.

ಮಾದಕ ವಸ್ತುಗಳು ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾದಕ ವಸ್ತುಗಳಿಗೆ ಅಂತ್ಯವಾಡಲು ಮಕ್ಕಳು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರೆ ಕೊಟ್ಟಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣಕ್ಕೆ ಕಡಿವಾಣ ಹಾಕಲಾಗಿದೆ. ಮಾದಕ ವಸ್ತು ಸೇವನೆ ಮಾಡಿದರೆ ಸಾವು ನೋವು ಹಾಗೂ ಯುವ ಜನಾಂಗದ ಭವಿಷ್ಯಕ್ಕೆ ಕಂಟಕವಾಗಲಿದೆ. ಹೀಗಾಗಿ ಯುವ ಜನತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತು ದಿನದ ಪ್ರಯುಕ್ತ ಬೃಹತ್ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ವಸ್ತುಗಳು ನಮ್ಮ ಸಮಾಜಕ್ಕೆ ಕ್ಯಾನ್ಸರ್‌ನಂತೆ ರೋಗ ಅಂಟಿಸುತ್ತದೆ. ಇದರಿಂದ ಸಮಾಜವನ್ನು ರಕ್ಷಿಸಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು. ಮಕ್ಕಳು ಈ ದೇಶದ ಆಸ್ತಿಯಾಗಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ವಿದ್ಯಾವಂತರಾಗಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಮಕ್ಕಳು ವಿಶ್ವದ ಯಾವುದೇ ಉನ್ನತ ಹುದ್ದೆಗೆ ಏರಬಹುದು. ಮಕ್ಕಳು ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಮಾದಕ ದ್ರವ್ಯ ದುಶ್ಚಟಗಳಿಂದ ದೂರ ಉಳಿಯಬೇಕು ಆಗ ಮಾತ್ರ ತಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು. ನಿಮ್ಮ ಸ್ನೇಹಿತರು ಅಥವಾ ಪರಿಚಯಸ್ಥರು ಯಾರಾದರೂ ಮಾದಕ ವ್ಯಸನಿಗಳಾದರೆ ಅವರನ್ನು ಪೊಲೀಸರು ಬಂಧಿಸಿ ನ್ಯಾಯಲಯದಲ್ಲಿ ಅವರಿಗೆ ಶಿಕ್ಷೆಯಾಗಲಿದೆ ಎಂಬ ಸಂದೇಶ ಕುರಿತು ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

ಕಳೆದ ೨ ವರ್ಷಗಳಲ್ಲಿ ಡ್ರಗ್ಸ್ ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಲ್ಲಿ ಸಿಕ್ಕಿಬಿದ್ದು, ಯಾವ ರೀತಿ ಸಂಕಷ್ಟ ಅನುಭವಿಸಿದರು ಎಂಬುದನ್ನು ನೋಡಿದ್ದೀರಿ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

 

Related