ಆರ್ ಟಿ ಓ ಮುಂದೆ ಡ್ರೈವಿಂಗ್ ಟೆಸ್ಟ್ ಬೇಕಿಲ್ಲ : ಹೊಸ ನಿಯಮ ಜಾರಿ

  • In State
  • May 5, 2022
  • 241 Views

ಕೇಂದ್ರ ಸರ್ಕಾರ ದೇಶದಲ್ಲಿನ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನೀತಿಯನ್ನು ಸರಳೀಕೃತಗೊಳಿಸಿದೆ. ಇದರಿಂದ ಹೊಸದಾಗಿ ಡ್ರೈವಿಂಗ್ ಲೆಸೆನ್ಸ್ ಪಡೆಯುವವರು, ಹಳೆ ಲೆಸೆನ್ಸ್ ನವೀಕರಿಸುವವರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.

ರಾಜ್ಯ ಅಥವ ಕೇಂದ್ರ ಸರ್ಕಾರದ ಸಾರಿಗೆ ಪ್ರಾಧಿಕಾರದ ಅಡಿಯಲ್ಲಿ ಖಾಸಗಿ ಡ್ರೈವಿಂಗ್ ಕೇಂದ್ರಗಳು ಇರಲಿದೆ. ಈ ಕೇಂದ್ರಗಳು ಡ್ರೈವಿಂಗ್ ಲೆಸೆನ್ಸ್ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈ ಕೇಂದ್ರಗಳ ಅವಧಿ ಕೇಲವ 5 ವರ್ಷ ಮಾತ್ರ, ಬಳಿಕ ಪರವಾನಗಿಯನ್ನು ನವೀಕರಣ ಮಾಡಬೇಕು.

ಸದ್ಯ ಡ್ರೈವಿಂಗ್ ಸ್ಕೂಲ್ ಮೂಲಕ ಅಥವ ವೈಯುಕ್ತಿಕವಾಗಿ ಲೈಸೆನ್ಸ್ ಅರ್ಜಿ ಹಾಕಿದರೆ ಆರ್ ಟಿ ಒ ಅಧಿಕಾರಗಳ ಮುಂದೆ ಡ್ರೈವಿಂಗ್ ಟೆಸ್ಟ್ ಮಾಡಬೇಕು. ಈ ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಮಾತ್ರ ಲೆಸೆನ್ಸ್ ನೀಡಲಾಗುತ್ತದೆ. ಆದರೆ ಹೊಸ ನಿಯಮದಡಿಯಲ್ಲಿ ಆರ್ ಟಿ ಒ ಮುಂದೆ ಡ್ರೈವಿಂಗ್ ಟೆಸ್ಟ್ ನೀಡಬೇಕಾದ ಅಗತ್ಯವಿಲ್ಲ. ಕೇಂದ್ರ ಅಥವ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಡ್ರೈವಿಂಗ್ ಕೇಂದ್ರಗಳಲ್ಲಿ ಡ್ರೈವಿಂಗ್ ಪಾಸ್ ಮಾಡಿದರೆ ಸಾಕು. ಈ ಕೇಂದ್ರಗಳು ನೀಡುವ ಡ್ರೈವಿಂಗ್ ಲೆಸೆನ್ಸ್ ನಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೈಟ್ ಮೋಟಾರ್, ಗೇರ್, ವಿಥ್ ಗೇರ್ ಸೇರಿದಂತೆ ಹಲವು ವಿಭಾಗಗಳು ಇರಲಿವೆ.

Related