ಮಾಗಿ ಉತ್ಸವಕ್ಕೆ ಚಾಲನೆ

  • In State
  • December 22, 2023
  • 57 Views
ಮಾಗಿ ಉತ್ಸವಕ್ಕೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವ ನಡೆಯುತ್ತಿದ್ದು ಇಂದಿನಿಂದ (ಡಿಸೆಂಬರ್ 22) ರಿಂದ ಜನವರಿ 1ರವರೆಗೆ ಈ ಮಾಗಿ ಉತ್ಸವ ನಡೆಯಲಿದ್ದು ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸುಮಾರು 35 ವಿಧಗಳ ನಾಲ್ಕು ಲಕ್ಷ ಹೋಗಳ ಪ್ರದರ್ಶನ ಈ ಮಾಗಿ ಉತ್ಸವದಲ್ಲಿ ನೆರವೇರಲಿದೆ. ಇನ್ನು ಉತ್ಸವ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಮೆರವಣಿಗೆಯಾಗಲಿದ್ದು ಸಂಪ್ರದಾಯಬದ್ಧವಾಗಿ ಹಲವು ಪೂಜಾ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನೆರವೇರಲಿದೆ.

ಇನ್ನು ಪ್ರತಿ ವರ್ಷದಂತೆ ಈ ಬಾರಿಯೂ ಮಾಗಿ ಉತ್ಸವ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿದು ಬರುತ್ತಿದೆ.

ಈ ಮಾಗಿ ಉತ್ಸವಕ್ಕೆ ಕೊರೋನಾ ಕಂಟಕವಾಗುತ್ತಾ ಎಂದು ಹೇಳಲಾಗುತ್ತಿದೆ. ಹೌದು ರಾಜ್ಯದಲ್ಲಿ ಇತ್ತೀಚಿಗೆ ಕೊರೋನಾ ಸಂಖ್ಯೆಯಲ್ಲಿ ಏರಿಕೆಯಾಗಿರುತ್ತಿರುವುದರಿಂದ ಮಾಗಿ ಉತ್ಸವಕ್ಕೆ ಸಾವಿರಾರು ಜನರು ಭಾಗಿಯಾಗುವುದರಿಂದ ಮತ್ತೆ ಕೊರೋನಾ ಅಲೆ ಅಬ್ಬರಿಸುತ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

ಇನ್ನು ಮಾಗಿ ಉತ್ಸವದಲ್ಲಿ ಕೊರೊನಾ ಮುನ್ನೆಚ್ಚರಿಕೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಮಾಸ್ಕ್ ಹಾಕಿಕೊಂಡು ಮಾಗಿ ಉತ್ಸವಕ್ಕೆ ಬರಬೇಕೆಂದು ಹೇಳಲಾಗುತ್ತಿದೆ.

Related