ಪೂರ್ವಭಾವಿ ಕಲಿಕೆಯ ಗುರುತಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ

ಪೂರ್ವಭಾವಿ ಕಲಿಕೆಯ ಗುರುತಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು : ಕೋವಿಡ್ ಸಂಕಷ್ಟ ಹಿನ್ನೆಯಲ್ಲಿ ಕಾರ್ಮಿಕ ಇಲಾಖೆಯು ಶ್ರಮಿಕ ವರ್ಗದ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸಿದ್ದು, ಪರಿಹಾರ ಕಾರ್ಯಗಳಿಗೆ ಸುಮಾರು 1000 ಕೋಟಿ ರೂ. ವ್ಯಯಿಸಿದೆ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ತಿಳಿಸಿದರು.

ಕರ್ನಾಟಕದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮ ವ್ಯವಸ್ಥೆ ಮಾಡುವ ಸಲುವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲಾಗಿದ್ದು, ಈ ನಿಟ್ಟಿನಲ್ಲಿ ನಗರದ ನೃಪತುಂಗ ರಸ್ತೆಯ ಯುವನಿಕ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಕಲಿಕೆಯ ಗುರುತಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊರೋನಾ ಇಲಾಖೆಯ ಕಾರ್ಯವೈಖರಿಗೆ ಚುರುಕು ನೀಡಲಾಗಿದೆ ಎಂದು ಹೇಳಿದ ಅವರು, 800 ಕೋಟಿ ರೂ. ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದ ರಾಜ್ಯದಲ್ಲಿ ಯೋಜನೆ ಜಾರಿ ಮಾಡುವ ಸಂಸ್ಥೆಗಳ ಜೊತೆಯಲ್ಲಿ ಜಂಟಿ ಸಹಯೋಗದ ಮೂಲಕ ಪ್ರಮಾಣ ಪತ್ರವಿಲ್ಲದ ಕಾರ್ಮಿಕರು ಅಂದರೆ ಸಹಾಯಕ ಎಲೆಕ್ಟಿಶಿಯನ್, ಬಾರ್ ಬೆಂಡರ್, ಸ್ಟೀಲ್ ಫಿಕ್ಸರ್, ಮೇಸನ್ ಜೆನರಲ್, ನಿರ್ಮಾಣ ಪೇಂಟರ್, ಸಹಾಯಕ ಸ್ಕಫೋಲ್ಡರ್, ಪ್ಲಂಬರ್ ಜೆನರಲ್, ಕಾರ್ಪೆಂಟರ್ ಇತ್ಯಾದಿ ಕಾರ್ಮಿಕರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗುತ್ತಿದೆ.

ಸುರಕ್ಷಿತ ಕಾರ್ಯ ವಿಧಾನವನ್ನು ಅಳವಡಿಸಿಕೊಳ್ಳುವ ಉದ್ಯಮದ ಅಗತ್ಯತೆಗೆ ತಕ್ಕಂತಹ ಸಲಕರಣೆಗಳನ್ನು ಮತ್ತು ಸಾಧನೆ ನಿರ್ವಹಿಸುವ ತರಬೇತಿ ಹೊಂದಿದ ಮತ್ತು ಪ್ರಮಾಣಿತ ಕಾರ್ಯಪಡೆಯ ಮೇಲೆ ಕಟ್ಟಡ ನಿರ್ಮಾಣ ಉದ್ಯಮವು ಭರವಸೆ ಇಡಬಹುದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ನುಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಮತ್ತು ಇಲಾಖೆ ಜಂಟಿ ಕಾರ್ಯದರ್ಶಿ ಎಸ್. ರಾಜಶೇಖರ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಮತ್ತಿತರರಿದ್ದರು.

Related