ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ

ತುರುವೇಕೆರೆ: ಕಳೆದ ೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಿರುವುದಾಗಿ ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ದಂಡಿನಶಿವರ ಹೋಬಳಿ ಹೋನ್ನೇನಹಳ್ಳಿ, ಚಾಕುವಳ್ಳಿ, ಹೆಗ್ಗರೆ, ಹಡವನಹಳ್ಳಿ, ಹಾಗೂ ಕಸಬಾ ಹೋಬಳಿಯ ಬಲಮಾದಿಹಳ್ಳಿ, ಹಾಗೂ ಮಂತ್ರಿಕೇನಹಳ್ಳಿ ಗ್ರಾಮಗಳಲ್ಲಿ ಗ್ರಾಮೀಣಭಿವೃದ್ದಿ ಪಂಚಾಯತ್, ವಿಶೇಷ ಅನುದಾನ ಯೋಜನೆಯಡಿಯಲ್ಲಿ ಸಿ.ಸಿ ರಸ್ತೆ, ನಿರ್ಮಾಣಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಹಡವನಹಳ್ಳಿ ಗ್ರಾಮದಲ್ಲಿ ಮಾತನಾಡಿ ತಾಲೂಕಿನಲ್ಲಿ ನೂರಾರು ಕೋಟಿ ಮೋತ್ತದ ಯೋಜನೆ ಅಭಿವೃದ್ದಿ ಕಾಮಗಾರಿಗಳು ಬರದಿಂದ ಸಾಗುತ್ತಿದ್ದು, ಮುಖ್ತಮಂತ್ರಿ ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಇದರ ಪರಿಣಾಮವಾಗಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ.
ಈಗಾಗಲೆ ಹೇಮಾವತಿ ನಾಲೆಯಿಂದ ನಮ್ಮ ವಿಧಾನ ಸಭಾ ಕ್ಷೇತ್ರದ ಬಹುಪಾಲು ಕೆರೆ ಕಟ್ಟೆಗಳಿಗೆ ನೀರು ಹರಿಸಲಾಗಿದೆ. ಮತ್ತು ಎತ್ತಿನ ಹೊಳೆಯಿಂದ ಭೂಮಿ ಕಳೆದುಕೊಂಡ ದಂಡಿನಶಿವರ ಹೋಬಳಿಯ ರೈತರಿಗೆ ಸರ್ಕಾರವು ಕೂಡಲೇ ಭೂಮಿ ಪರಿಹಾರ ನೀಡಬೇಕು. ಮತ್ತು ನಮ್ಮ ವ್ಯಾಪ್ತಿಗೆ ಬರುವ ನೀರಿನ ಪ್ರಮಾಣವನ್ನು ನೀಡಬೇಕು ಇಲ್ಲದಿದ್ದರೆ ಎತ್ತಿನ ಹೊಳೆ ಕಾಮಗಾರಿಯನ್ನು ಮುಂದಿನ ವಾರದಿಂದ ಈ ಭಾಗದ ರೈತರ ಜೊತೆಗೂಡಿ ಕಾಮಗಾರಿ ನಿಲ್ಲಿಸಲಾಗುವುದು ಎಂದರು.
ದಂಡಿನಶಿವರ ಹೋಬಳಿಯ ಚಾಕುವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಯೋಜನೆಯಿಂದ ಸುಮಾರು ೨೦ ಕೋಟಿ ರೂ ವೆಚ್ಚದಲ್ಲಿ ವಸತಿ ಶಾಲೆಯನ್ನು ಪ್ರಾರಂಭಿಸಲು ಇನ್ನು ೧೫ ದಿನಗಳಲ್ಲಿ ಭೂಮಿ ಪೂಜೆ ನೆರೆವೇರಿಸಲಾಗುವುದು. ಕೊರೋನಾ ಮಹಾಮಾರಿಯಿಂದ ಕಳೆದ ೬ ತಿಂಗಳಿಂದ ಅಭಿವೃದ್ದಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದವು. ಈಗ ಸರ್ಕಾರಕ್ಕೆ ಹೆಚ್ಚಿನ ಅನುದಾನ ತಂದು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನು ಮಾಡುವ ಗುರಿ ಇಟ್ಟುಕೊಂಡಿರುವುದಾಗಿ ತಿಳಿಸಿದರು.

Related