ಕುಡಿಯಿರಿ ಯಾಲಕ್ಕಿ ಚಹಾ

ಕುಡಿಯಿರಿ ಯಾಲಕ್ಕಿ ಚಹಾ

ಮಾ. 23 : ಹಲವು ರೋಗ ಸಮಸ್ಯೆಗೆ ಯಾಲಕ್ಕಿ ಚಹಾ ರಾಮಬಾಣ ಕಾಳು ಮೆಣಸು, ಲವಂಗ ಮತ್ತು ದಾಲ್ಚಿನ್ನಿ ಜೊತೆಗೆ ಯಾಲಕ್ಕಿ (ಇಲಾಚಿ) ಯನ್ನು ಒಂದೆರಡು ನಿಮಿಷಿ ಸ್ವಲ್ಪ ನೀರಲ್ಲಿ ಕುದಿಸಿ. ತದ ನಂತರ ಕೆಳಗಿಳಿಸಿ ಅದನ್ನು ಸೋಸಿ. ಇದಕ್ಕೆ ಬಿಸಿ ಹಾಲು ಸಕ್ಕರೆ ಅಥವಾ ಜೇನು ತುಪ್ಪವನ್ನು ಸೇರಿಸಿ ಬೆಚ್ಷಗಿರುವಾಗಲೇ ಕುಡಿಯಬೇಕು. ಬೇಕಿದ್ದರೆ ನೀವು ಹಾಲು ಅಥವಾ ಸಕ್ಕರೆ ಈ ಎರಡನ್ನು ಬೆರೆಸದೆ ಕೇವಲ ಜೇನುತುಪ್ಪ ಮಾತ್ರ ಬೆರೆಸಿ ಕುಡಿಯಬಹುದು ಅಥವಾ ಬರಿ ಕೇವಲ ಬಿಸಿ ಮಾಡಿದ ಮಸಾಲೆಯುಕ್ತ ಚಹಾವನ್ನು ಮಾತ್ರ ಸೇವಿಸಬಹುದು. ಆದರೆ ಹಾಲು ಮತ್ತು ಜೇನುತುಪ್ಪದ ಜೊತೆಗೆ ಮಸಾಲೆ ಸೇರಿಸಿಕೊಂಡು ಸೇವಿಸಿದರೆ ಈ ಚಹ ಇನ್ನಷ್ಟು ರುಚಿಕರವಾಗಿರಲಿದೆ.
ಇದನ್ನೆ ಪ್ರತಿದಿನಅನುಸರಿಸಬಹುದು.ಇದರಿಂದ ಪಚನ ಕ್ರಿಯೆಚನ್ನಾಗಿ ಆಗಲಿದೆ. ದೇಹದ ಕೊಲೆಸ್ಟರಾಲ್ ಕಡಿಮೆ ಮಾಡಲಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ಉಪಯುಕ್ತತೆಯೂ ಇದೆ.

Related