ಕನ್ನಡ ಪ್ರಗಾಥಗಳ ಸಾಮ್ರಾಟ ಡಾ. ದೊಡ್ಡರಂಗೇಗೌಡ್ರು

ಕನ್ನಡ ಪ್ರಗಾಥಗಳ ಸಾಮ್ರಾಟ ಡಾ. ದೊಡ್ಡರಂಗೇಗೌಡ್ರು

ಗಜೇಂದ್ರಗಡ : ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಭಾಧ್ಯಕ್ಷರಾಗಿ ಆಯ್ಕೆಯಾದ ಡಾ. ದೊಡ್ಡರಂಗೇಗೌಡರ ಕುರಿತು ಉಪನ್ಯಾಸಕ ಪ್ರಕಾಶ ತಳವಾರ ಉಪನ್ಯಾಸ ನೀಡಿದರು.

ಡಂಬಳದ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ ತಳವಾರ, ಪ್ರಗಾಥ, ಒಂದು ಕಾವ್ಯದ ಪ್ರಕಾರ ಸಾಹಿತ್ಯದ ಒಂದು ಮಜಲು ಆಗಿದ್ದು, ಗ್ರೀಕ್ ದೇಶದಲ್ಲಿ ಹುಟ್ಟಿ ತುಂಬ ಪ್ರಚಾರದಲ್ಲಿದ್ದ, ಹಾಡಿನ ರೂಪದ ದೊಡ್ಡ ಕವಿತೆ ಕನ್ನಡಕ್ಕೆ ಪ್ರಗಾಥವನ್ನು ತಂದು ಅದಕ್ಕೆ ತಕ್ಕ ಹೆಸರನ್ನು ಸಂಸ್ಕೃತದಿಂದ ತಂದುಕೊಟ್ಟವರು ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಎಂದು ಬಣ್ಣಿಸಿದರು.

ದೊಡ್ಡರಂಗೇಗೌಡರು 600ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಗೀತ ರಚನೆಕಾರರಾಗಿ, ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ, ಧ್ವನಿ ಸುರುಳಿ ಹೊರತಂದು ಆಲ್ಬಂಗಳನ್ನು ರಚಿಸಿದ ಕೀರ್ತಿ ದೊಡ್ಡರಂಗೆಗೌಡರಿಗೆ ಸಲ್ಲುತ್ತದೆ, ಪ್ರತಿಯೊಬ್ಬ ಕನ್ನಡಿಗರ ಮನೆ ಮಾತಾಗಿವೆ ಎಂದರು.

ಈ ಸಂದರ್ಭದಲ್ಲಿ ಹೆಚ್.ಕೆ.ಭಜಂತ್ರಿ, ಭಿಮಾಂಬಿಕಾ ನೂಲ್ವಿ, ಪ್ರಶಾಂತ್ ನೆಲ್ಲೂರ, ಬಿ.ವಿ.ಅಂಗಡಿ, ಶರಣಮ್ಮ ಅಂಗಡಿ, ಎಸ್.ಐ ಪತ್ತಾರ, ಬಿ.ವಿ. ಮುನವಳ್ಳಿ, ಕೆ.ಜಿ ಸಂಗಟಿ, ಎಂ.ಎಸ್ ಮಕಾನದಾರ, ಎಸ್.ಎಸ್. ನರೇಗಲ್ಲ, ಶಂಕರ ಕಲ್ಲಿಗನೂರ, ಎನ್.ಎಸ್. ಸವಣೂರ, ಹುಚ್ಚಪ್ಪ ಹಾವೇರಿ ಉಪಸ್ಥಿತರಿದ್ದರು.

Related