ದುಪ್ಪಟ್ಟಾದ ಬೆಳ್ಳುಳ್ಳಿ ಬೆಲೆ

  • In State
  • December 12, 2023
  • 44 Views
ದುಪ್ಪಟ್ಟಾದ ಬೆಳ್ಳುಳ್ಳಿ ಬೆಲೆ

ಬೆಂಗಳೂರು: ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆಗೆ ರಾಜ್ಯದ ಜನ ತತ್ತರಿಸಿದ್ದರು. ಇದರ ಬೆನ್ನಲ್ಲೇ ಬೆಳ್ಳುಳ್ಳಿಯ ಬೆಲೆಯೂ ಸಹ ಗಗನಕೇರಿದೆ.

ಹೌದು ಇತ್ತೀಚಿಗೆ ಪ್ರತಿನಿತ್ಯ ಬಳಸುವಂತಹ ವಸ್ತುಗಳ ಬೆಲೆ ಹೆಚ್ಚುತ್ತಿರುವುದರಿಂದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟು ದಿನ ಟೊಮೇಟೊ ಮತ್ತು ಈರುಳ್ಳಿಯ ಬೆಲೆ ಹೆಚ್ಚಿತ್ತು, ಇದರ ಬೆನ್ನೆಲು ಈಗ ಬೆಳ್ಳುಳ್ಳಿಯ ಬೆಲೆ ದುಪ್ಪಟ್ಟಾಗಿದೆ ಇದರಿಂದ ಗ್ರಾಹಕರು ಹೈರಾಣ ಆಗಿದ್ದಾರೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300-400ರೂ. ತಲುಪಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳ್ಳುಳ್ಳಿ ಫಸಲು ಉತ್ತಮವಾಗಿರದ ಕಾರಣ ಈ ಬಾರಿ ಮಹಾರಾಷ್ಟ್ರದಿಂದ ಇದರ ಪೂರೈಕೆ ತಗ್ಗಿದೆ. ನಾಸಿಕ್ ಹಾಗೂ ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಆದರೆ, ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಚೆನ್ನಾಗಿ ಬಂದಿಲ್ಲ. ಹೀಗಾಗಿ ಮುಂಬೈನಲ್ಲಿರುವ ಬೆಳ್ಳುಳ್ಳಿ ಸಗಟು ವ್ಯಾಪಾರಿಗಳು ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಬೆಳ್ಳುಳ್ಳಿ ಖರೀದಿಸುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚ ಹಾಗೂ ಸ್ಥಳೀಯ ತೆರಿಗೆಗಳ ಕಾರಣಕ್ಕೆ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.

Related