ನೀರನ್ನು ವ್ಯರ್ಥ ಮಾಡಬೇಡಿ: ಶಾಸಕ ಲಿಂಬಾವಳಿ

ನೀರನ್ನು ವ್ಯರ್ಥ ಮಾಡಬೇಡಿ: ಶಾಸಕ ಲಿಂಬಾವಳಿ

ಮಹದೇವಪುರ, ಫೆ. 29: ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕ್ಷೇತ್ರದ ವಿವಿಧ ಭಾಗಗಳಲ್ಲಿ  ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಿಸಲಾಗುವುದು ಎಂದು ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ್ ಲಿಂಬಾವಳಿ ಅವರು ತಿಳಿಸಿದರು.

ಕ್ಷೇತ್ರ ಗ್ರಾಮಾಂತರ ಭಾಗದ ಸುಲಿಕುಂಟೆ, ಕೊಡತಿ ಹಾಗೂ ಬೆಳಂದೂರು ವಾರ್ಡ ನ ದೊಡ್ಡಕನ್ನಲ್ಲಿ, ಕಾಡುಬಿಸಿನಹಳ್ಳಿ ಮತ್ತು ಮಾರತಹಳ್ಳಿ ವಾರ್ಡ್ ನ ಯಮಲೂರು ಗ್ರಾಮಗಳಲ್ಲಿ ಶಾಸಕರ ನಿಧಿ ಹಾಗೂ ಹುವಾಯ್ ಸಂಸ್ಥೆಯ ಸಹಯೋಗ ದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಶಾಸಕ ನಿಧಿಯಿಂದ ಅಂಗನವಾಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳಿಯ ಮುಖಂಡ ರೊಂದಿಗೆ ಸೇರಿ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದರು.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಲಿದೆ, ಎಲ್ಲರೂ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಬೇಕೆಂದು ಸಲಹೆ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಭಾಗದಲ್ಲಿ ಅವಶ್ಯಕತೆ ಇದ್ದು  ಶೀಘ್ರವಾಗಿ ಎಲ್ಲಾ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆರಂಬಿಸಿಲು ಕ್ರಮ ಕೈಗೊಳ್ಳಲಾಗುವುದೆಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮನೋಹರ್ ರೆಡ್ಡಿ, ಪಾಲಿಕೆ ಸದಸ್ಯ ರಮೇಶ್, ಹುವಾಯ್ ಸಂಸ್ಥೆಯ ಮುಖ್ಯಸ್ಥ ಗಿಲ್ಬರ್ಟ್, ಮುಖಂಡರಾದ ರಾಜಾರೆಡ್ಡಿ, ಸುರೇಶ್, ದೊಡ್ಡಕನ್ನಲ್ಲಿ ಮಂಜುನಾಥ್, ಶೇಖರ್ ರೆಡ್ಡಿ, ಲೋಕೇಶ್, ಮುನಿಕೃಷ್ಣ, ರಘು, ವಿಕ್ರಮ್, ಸುನೀಲ್ ಸೇರಿದಂತೆ ಹಲವಾರು ಹಾಜರಿದ್ದರು.

Related