ಝೀಕಾ ವೈರಸ್ ಬಗ್ಗೆ ಭಯ ಬೇಡ: ದಿನೇಶ್ ಗುಂಡೂರಾವ್

ಝೀಕಾ ವೈರಸ್ ಬಗ್ಗೆ ಭಯ ಬೇಡ: ದಿನೇಶ್ ಗುಂಡೂರಾವ್

ಬೆಂಗಳೂರು: ದೇಶ ಮಾತ್ರವಲ್ಲೆ ಇಡೀ ಜಗತ್ತಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕರೋನ ವೈರಸ್ ನ ಪ್ರಭಾವದಿಂದ ಹಲವಾರು ಜೀವಗಳು ಮಣ್ಣು ಸೇರಿಕೊಂಡಿವೆ.

ಇನ್ನು ರಾಜಧಾನಿ ಬೆಂಗಳೂರಿನ ನೆರೆಯ ಜಿಲ್ಲೆಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಹೊಸ ಝೀಕಾ ವೈರಸ್‌ ಇರುವುದು ಪತ್ತೆಯಾಗಿದೆ. ಝೀಕಾ ವೈರಸ್‌ ಹರಡದಂತೆ ತಡೆಯುವ ಮುಂಜಾಗರೂಕತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿನ ಸೊಳ್ಳೆಗಳನ್ನು ಹಿಡಿದು ಅವುಗಳಲ್ಲಿ ರೋಗಕಾರಕ ವೈರಸ್‌ ಇದೆಯೇ ಎಂದು ಪರಿಣತರು ಪರೀಕ್ಷೆ ನಡೆಸಿದ್ದರು.

ಈ ವೈರಸ್‌ ನಿಂದ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಕಾಣಸಿಕೊಂಡಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮನುಷ್ಯರಲ್ಲಿ ಝೀಕಾ ಪಾಸಿಟಿವ್ ಬಂದಿಲ್ಲ. ಸೊಳ್ಳೆಗಳಿಗೆ ಬಂದಿದೆ, ಸೊಳ್ಳೆಗಳ ಪೂಲ್ ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಬಗ್ಗೆ 10 ದಿನಗಳ ಹಿಂದೆ ವರದಿ ಬಂದಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ ಆದರೆ ಜ್ವರ, ಕೀಲು ನೋವು ಅಥವಾ ಕಣ್ಣಿನ ಬಿಳಿಭಾಗವನ್ನು ಆವರಿಸುವ ಪೊರೆಯ ಸೋಂಕಿಗೆ ಇದು ಕಾರಣವಾಗಬಹುದು. ಗರ್ಭಿಣಿಯರಲ್ಲಿ ಝೀಕಾ ವೈರಸ್ ಸೋಂಕು ಮೈಕ್ರೊಸೆಫಾಲಿ (ಗಂಭೀರ ಜನ್ಮ ದೋಷ) ಮತ್ತು ಮಗುವಿನ ಕಣ್ಣು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಸೊಳ್ಳೆಗಳ ಮೂಲಕ ಈ ಸೋಂಕು ಹರಡುತ್ತದೆ ಎಂದರು.

 

 

Related