ಚಿರತೆಯ ಹಾವಳಿಗೆ ಭಯ ಪಡಬೇಡಿ: ಎಂ ಸತೀಶ್‌ ರೆಡ್ಡಿ

ಚಿರತೆಯ ಹಾವಳಿಗೆ ಭಯ ಪಡಬೇಡಿ: ಎಂ ಸತೀಶ್‌ ರೆಡ್ಡಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಬೆಂಗಳೂರಿನ ಜನ ಕಂಗಾಲಾಗಿದ್ದಾರೆ.

ಬೆಂಗಳೂರಿನ ಹೊಸೂರು ರಸ್ತೆ ಕೂಡ್ಲುಗೇಟ್ ಬಳಿಯಲ್ಲಿ ಕಳೆದ ಎರಡು ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೊಸೂರು ರಸ್ತೆ ಕೂಡ್ಲುಗೇಟ್ ಸುತ್ತಮುತ್ತ ಚಿರತೆಯನ್ನು ಹಿಡಿಯಲು ಎರಡು ಬೋನಗಳನ್ನು ಇಡಲಾಗಿದೆ ಎಂದು ಎಂದು ಶಾಸಕ ಎಂ ಸತೀಶ್‌ ರೆಡ್ಡಿ ತಿಳಿಸಿದಾರೆ.

ನಗರದಲ್ಲಿ ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು ಈಗಾಗಲೇ ಕಾರ್ಯಚರಣೆ ನಡೆಯುತ್ತಿದೆ. ಚಿರತೆ ಇರುವ ಸ್ಥಳ ಪತ್ತೆಯಾಗಿದೆ ಅರಣ್ಯ ಅಧಿಕಾರಿಗಳು ಹಗಲು ರಾತ್ರಿ ವಿಶೇಷ ತಂಡಗಳನ್ನು ರಚಿಸಿ ಈ ಶೋಧಕಾರ್ಯ ಮಾಡುತ್ತಿದ್ದಾರೆ. ಸದ್ಯ 2 ಬೋನುಗಳನ್ನು ಇಡಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚಿನ ಬೋನ್ ಗಳನ್ನು ಇಡಲಾಗುವುದು.

ಇನ್ನು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಆತಂಕ ಭಯವಿಲ್ಲದೆ ಎಚ್ಚರಿಕೆಯಿಂದ ಇರಬೇಕಾಗಿದೆ ಅಧಿಕಾರಗಳು ಸಾರ್ವಜನಿಕರಿಗೆ ಹೇಳಿದ್ದಾರೆ.

ಈ ಸಂದರ್ಬದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related