ಜನಪ್ರತಿನಿಧಿಗಳಿಗೆ ಬೇಡವಾಯಿತೇ ಸಾವಳಗಿ ಗ್ರಾಮ?

ಜನಪ್ರತಿನಿಧಿಗಳಿಗೆ ಬೇಡವಾಯಿತೇ ಸಾವಳಗಿ ಗ್ರಾಮ?

ಸಾವಳಗಿ : ಹಲವಾರು ವರ್ಷಗಳಿಂದ ಬಾಗಲಕೋಟೆಯ ಸಾವಳಗಿ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಜನರ ಕೂಗು ಕೂಗಾಗಿಯೇ ಉಳಿದಿದೆ

ಈ ಕುರಿತು ಸುಮಾರು 70 ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡಿದರೂ ತಾಲೂಕು ಕೇಂದ್ರ ಘೋಷಿಸದೇ ಇರುವುದರಿಂದ ಸಾವಳಗಿ ಗ್ರಾಮದ ಸಾರ್ವಜನಿಕರು ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಕೈಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಸುಮಾರು 50 ವರ್ಷಗಳ ನಿರಂತರ ಹೋರಾಟ ಮಾಡುತ್ತಿದ್ದೆವೆ, ಸಾವಳಗಿ ಹೋಬಳಿಯಲ್ಲಿ 24 ಹಳ್ಳಿಗಳು ಹಾಗು 12 ಗ್ರಾ.ಪಂ ಒಳಗೊಂಡಿದ್ದು, ಒಂದು ಲಕ್ಷಕ್ಕು ಅಧಿಕ ಜನಸಂಖ್ಯೆ ಹೊಂದಿದೆ. ಆದರೆ ಇಲ್ಲಿನ ಜನರ ಹೋರಾಟಗಳನ್ನು ಹಾಗೂ ಸಾವಳಗಿಯನ್ನು ರಾಜ್ಯಸರ್ಕಾರ ಕಡೆಗಣಿಸುತ್ತಲೇ ಬಂದಿದೆ. ರಾಜ್ಯದಲ್ಲಿ ಹಲವಾರು ಗ್ರಾಮಗಳನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದೆ. ಆದರೆ ಸಾವಳಗಿಯನ್ನು ಮಾತ್ರ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಸಾರ್ವಜನಿಕರಿಗೆ ಅಸಮಾಧಾನಗೊಂಡಿದ್ದಾರೆ.

ತಾಲೂಕು ಕೇಂದ್ರ ಘೋಷಿಸುವವರೆಗೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ. ಗ್ರಾಮದ ಎಲ್ಲ ಹಿರಿಯರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಾಲೂಕು ಹೋರಾಟ ಸಮೀತಿಯವರು ತಿಳಿಸಿದರು.

ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗು ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಅವರ ಹುಟ್ಟೂರು ಸಾವಳಗಿ. ಇಂತಹ ಊರಿಗೆ ಈ ರೀತಿ ಅನ್ಯಾಯವಾದರೆ ಹೇಗೆ ಎಂದು ಗ್ರಾಮಸ್ಥರು ಮುಖಂಡರು ಪ್ರಶ್ನಿಸಿದ್ದಾರೆ
ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಬಸವರಾಜ ಪರಮಗೊಂಡ, ಸುಶೀಲಕುಮಾರ ಬೆಳಗಲಿ, ಸುಬಾಷ ಪಾಟೋಳಿ, ವಿಠ್ಠಲ ಉಮರಾಣಿ, ಸತಗೌಡ ನ್ಯಾಮಗೌಡ, ಬಾಪುಗೌಡ ಬುಲಗೌಡ ಸೇರಿದಂತೆ ಹಲವರು ಇದ್ದರು.

Related