ಡಿಕೆಶಿ ವಾರ್ನಿಂಗ್​​

ಡಿಕೆಶಿ ವಾರ್ನಿಂಗ್​​

ಬೆಂಗಳೂರು: ಕೋವಿಡ್​-19 ನೆಪವಾಗಿಟ್ಟುಕೊಂಡು ಗ್ರಾ.ಪಂ. ಚುನಾವಣೆ ಮುಂದೂಡುವ ಪ್ರಯತ್ನ ಸರ್ಕಾರ ನಡೆಸಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿಂದು ಮಾತನಾಡಿ, ಐದು ವರ್ಷಕ್ಕೊಮ್ಮೆ ಗ್ರಾ. ಪಂ. ಚುನಾವಣೆ ನಡೆಯುತ್ತವೆ. ಈ ಚುನಾವಣೆಗಳು ಮುಂದೂಡಲು ಬರುವುದಿಲ್ಲ,  ಪ್ರಕ್ರಿಯೆ ಸ್ಟಾರ್ಟ್ ಆಗಬೇಕಿತ್ತು. ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ, ಮಾಡದಿರುವುದು ಅನುಮಾನಕ್ಕೆ ಕಾರಣ ಎಂದರು. ಜಿಲ್ಲಾಧಿಕಾರಿಗೆ ಅಧಿಕಾರ ವಿದೆ ಚುನಾವಣೆ ಮುಂದೂಡಲು ಅಂತ ಹೇಳುತ್ತಿದ್ದಾರೆ. ಕಾಯ್ದೆ ಪ್ರಕಾರ ಮುಂದೂಡಲು ಸಾಧ್ಯವಿಲ್ಲ, ನಾಮ ನಿರ್ದೇಶನ ಮಾಡಲು ಸಾಧ್ಯವಿಲ್ಲ, ಹೀಗಾಗಿ ಚುನಾವಣೆ ನಡೆಸಲೇಬೇಕೆಂದು ರಾಜ್ಯ ಚುನಾವಣೆ ಆಯೋಗಕ್ಕೆ ಒತ್ತಾಯಿಸಿದ್ದೇವೆ ಅವರು ಸಹ ಕಾಯ್ದೆಯಂತೆ ನಡೆದುಕೊಳ್ಳುತ್ತೇವೆ ಅಂದಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಡಿಕೆಶಿ ಎಚ್ಚರಿಕೆ :  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಚುನಾವಣೆ ಮುಂದೂಡಲು ಬರುವುದಿಲ್ಲ. ಇವರು ಕ್ಯಾಬಿನೆಟ್​ನಲ್ಲಿ ನಿರ್ಧಾರ ಮಾಡಿದ್ದಾರೆ. ಚುನಾವಣೆ ಮುಂದೂಡೋಕೆ ಪ್ರಯತ್ನ ನಡೆಸಿದ್ದಾರೆ. ಡಿಸಿಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯದಂತೆ ಸೂಚಿಸಿದ್ದಾರೆ. ಕೋವಿಡ್-19 ಕಡೆ ಗಮನಕೊಡುವಂತೆ ಅವರಿಗೆ ತಿಳಿಸಿದ್ದಾರೆ ಎಂದರು.

Related