ಜಿಲ್ಲಾಡಳಿತ ‘ಮಹಾ’ ಎಡವಟ್ಪು

ಜಿಲ್ಲಾಡಳಿತ ‘ಮಹಾ’ ಎಡವಟ್ಪು

ಮಂಡ್ಯ: ಪಿ1475 ಸೋಂಕಿತ ಬಾಲಕಿ ವಿಚಾರದಲ್ಲಿ ಮಂಡ್ಯ ಜಿಲ್ಲಾಡಳಿತ ಮಹಾ ಎಟವಟ್ಟು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸೋಂಕು ತಗುಲಿರೊದು ಒಬ್ಬರಿಗೆ ಆದರೆ ಚಿಕಿತ್ಸೆ ನೀಡ್ತಿರೋದು ಮತ್ತೊಬ್ಬರಿಗಾ(?) ಎಂದು ಅನುಮಾನ ಮೂಡಿದೆ.

ಹೆಲ್ತ್ ಬುಲೆಟಿನ್ ಪ್ರಕಾರ ಸೋಂಕಿತ ಬಾಲಕಿಗೆ 7 ವರ್ಷ, ಇವರು ಮುಂಬೈನಿಂದ ಬಂದಿರೋ ಟ್ರಾವಲ್ ಹಿಸ್ಟರಿ ಇದೆ. ಆಸ್ಪತ್ರೆ ದಾಖಲಿಸಿಕೊಂಡಿರುವ ಬಾಲಕಿಗೆ 11 ವರ್ಷ ಇವರ ಟ್ರಾವಲ್ ಹಿಸ್ಟರಿ ನೋಡಿದ್ರೆ ರಾಣಿಬೆನ್ನೂರು ಆಗಿದೆ.

ಸದ್ಯ ಮೇ 17ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರುಳು ಗ್ರಾಮಕ್ಕೆ ಬಾಲಕಿಯೂ ತನ್ನ ಕುಟುಂಬದ ಜೊತೆ ಬಂದಿದ್ದರು. ಇವರು ಹೊರ ಜಿಲ್ಲೆಯಿಂದ ಬಂದಿದ್ದರಿAದ ಸ್ವ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕಿತ ಬಾಲಕಿ ಹೊರತುಪಡಿಸಿ ಆಕೆಯ ತಂದೆ, ತಾಯಿ, ಸಹೋದರ, ಸಹೋದರಿಗೆ ನೆಗೆಟಿವ್ ಬಂದಿದೆ ಎಂದು ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು ಅವರು ತಿಳಿಸಿದರು.ಇನ್ನು ಎರಡನೇ ಬಾರಿಯ ಪರೀಕ್ಷೆಯಲ್ಲೂ ಸೋಂಕಿತ ಬಾಲಕಿ ಕುಟುಂಬಕ್ಕೆ ಸೋಂಕು ದೃಢಪಟ್ಟಿಲ್ಲ. ಆದರೆ, ಇದೀಗ ಚಿನಕುರುಳಿ ಗ್ರಾಮವನ್ನು ತಾಲ್ಲೂಕು ಆಡಳಿತ ಸೀಲ್‌ಡೌನ್ ಮಾಡಲಾಗಿದೆ.

ಯುಗಾದಿ ಹಬ್ಬಕ್ಕೆ ರಾಣಿಬೆನ್ನೂರಿಗೆ ಹೋಗಿದ್ದ ಬಾಲಕಿಯ ಕುಟುಂಬದವರು. ಅಲ್ಲಿನ ಸ್ಥಳ ಗ್ರೀನ್‌ಜೋನ್‌ಲ್ಲಿದೆ. ಸೋಂಕು ಹೇಗೆ ಬಂದಿರಲು ಸಾಧ್ಯ(?) ಇದನ್ನು ಪುನರ್ ಪರೀಕ್ಷೆ ಮೂಲಕ ಸತ್ಯಾಸತ್ಯತೆ ಬಹಿರಂಗಪರಿಸಿ ಎಂದು ಸಿ.ಎಸ್ ಪುಟ್ಟರಾಜು ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

Related