ಪೊಲೀಸ್‌ರಿಗೆ ಮಾಸ್ಕ ಹಾಗೂ ಗ್ಲೌಸ್ ವಿತರಣೆ

  • In State
  • March 29, 2020
  • 2532 Views
ಪೊಲೀಸ್‌ರಿಗೆ ಮಾಸ್ಕ ಹಾಗೂ ಗ್ಲೌಸ್ ವಿತರಣೆ

ಬಾಗಲಕೋಟೆ , ಮಾ. 29: ದೇಶದಲ್ಲಿ ಹರಡಿರುವ ಕೋವಿಡ್–19 ವೈರಸ್ ಹತೋಟಿಗೆ ತರಲು ದೇಶದಲ್ಲಿ ಲಾಕ್  ಡೌನ್ ಮಾಡಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ದೇಶ್ಯಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಈ ಸಂಧರ್ಭದಲ್ಲಿ ನಾಡಿನ ಪ್ರತಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್‌ರು ತಮ್ಮ ಜೀವದ ಹಂಗು ತೊರೆದು, ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರಕ್ಷಕರ ಕಾರ್ಯ ಶ್ಲಾಘನೀಯವಾದುದು ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ತ್ರೀಷಲಾದೇವಿ ಕಣ್ಣಿನ ಆಸ್ಪತ್ರೆಯ ವೈದ್ಯ ಹಾಗೂ ಯುವ ನಾಯಕ ಡಾ. ಪದ್ಮಜೀತ ಅ. ನಾಡಗೌಡಪಾಟೀಲ ಬನಹಟ್ಟಿ ವಲಯದ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಮಾಸ್ಕ ಹಾಗೂ ಗ್ಲೌಸ್‌ಗಳನ್ನು ವಿತರಣೆ ಮಾಡಿ, ಹೇಳಿದರು.

ಆರಕ್ಷಕರ ಕರ್ತವ್ಯಕ್ಕೆ ಅನುಕೂಲವಾಗಲೆಂದು ಡಾ. ನಾಡಗೌಡಪಾಟೀಲ ಫೌಂಡೇಶನ್‌ದ ವತಿಯಿಂದ ಮಾಸ್ಕ್ ಹಾಗೂ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತೇರದಾಳ, ರಬಕವಿ ಹಾಗೂ ಮಹಾಲಿಂಗಪುರದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹಾಗೂ ಗ್ಲೌಸ್ ಮಾಡಲಾಗುವುದು ನಾಡಗೌಡಪಾಟೀಲರು ಎಂದರು.

ಜನರ ಆರೋಗ್ಯ ದೃಷ್ಠಿಯಿಂದ ನಮ್ಮ ಸಿಬ್ಬಂದಿ ಹಗಲಿರುಳು ಕರ್ತವ್ಯ ನಿರ್ವಹಿಸಬೇಕಾಗಿದೆ. ಸಾರ್ವಜನಿಕರಿಗೆ ಅನೇಕ ಬಾರಿ ಎಚ್ಚರಿಸಿದರು ಅನವಶ್ಯಕವಾಗಿ ಓಡುಡುತ್ತಿದ್ದಾರೆ. ಸರಕಾರದ ಆದೇಶಗಳನ್ನು ಜನರು ಪಾಲಿಸಬೇಕು. ನಮ್ಮ ಸಿಬ್ಬಂದಿಯವರಿಗೆ ಡಾ. ನಾಡಗೌಡಪಾಟೀಲ ಫೌಂಡೇಶನ್‌ದವರು ಮಾಸ್ಕ ಹಾಗೂ ಗ್ಲೌಸ್ ನೀಡಿರುವುದು ಸಂತಸವಾಗಿದೆ ಎಂದು ಬನಹಟ್ಟಿ ಸಿ.ಪಿ.ಆಯ್. ಕರನೇಶಗೌಡ ಜಿ. ಹೇಳಿದರು.

ಈ ಸಂದರ್ಭದಲ್ಲಿ ರಾಜಶೇಖರ ಸೋರಗಾಂವಿ, ಸಂಜಯ ಜೋತಾವರ, ಕುಮಾರ ಬಿಳ್ಳೂರ, ಸಂಜಯ ಅಮ್ಮಣಗಿಮಠ, ಸಂತಿವೂರ ಪೊಲೀಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related