ಕೊರೋನಾ ಕರ್ತವ್ಯ ನಿರತ ಪೊಲೀಸರು, ಪತ್ರಕರ್ತರಿಗೆ ಉಪಹಾರ ವಿತರಣೆ

ಕೊರೋನಾ ಕರ್ತವ್ಯ ನಿರತ ಪೊಲೀಸರು, ಪತ್ರಕರ್ತರಿಗೆ ಉಪಹಾರ ವಿತರಣೆ

ಬೈಲಹೊಂಗಲ: ಮಾನವನ ದುರಾಸೆಯಿಂದ ಪ್ರಕೃತಿ ನಾಶವಾಗಿ ಮನುಷ್ಯ ಕುಲ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ತಡೆಯಲು ಪ್ರತಿಯೊಬ್ಬರು ಮನೆ ಎದುರು ಸಸಿ ನೆಟ್ಟು ಪಾಲನೆ, ಪೋಷಣೆ ಮಾಡಿ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಬೇಕು ಎಂದು ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಹೇಳಿದರು.
ಪಟ್ಟಣದಲ್ಲಿ ಕೊರೋನಾ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವ ಪೊಲೀಸರು, ಪತ್ರಕರ್ತರಿಗೆ ಭಾನುವಾರ ಅರೋಗ್ಯ ಕವಚದ ಸ್ಟೀಮರ್, ಉಪಹಾರ ವಿತರಿಸಿದರು. ೫೦ ಕ್ಕೂ ಹೆಚ್ಚು ಸ್ಟೀಮರ್, ಉಪಹಾರ ವಿತರಿಸಲಾಯಿತು.
ಈ ವೇಳೆ ಮಾತನಾಡಿ, ಪ್ರಸ್ತುತ ದಿನದಲ್ಲಿ ಮಾನವೀಯತೆ ಮುಖ್ಯವಾಗಿದೆ. ಕೊರೋನಾ ನಿರ್ಮೂಲೆನೆಗೆ ಮನೆ ಮದ್ದು, ವೈದ್ಯರ ಸಲಹೆ ಅತ್ಯಗತ್ಯ. ಈ ಒಂದು ದೃಷ್ಠಿಯಿಂದ ಹುಕ್ಕೇರಿ ಡಾ.ಚಂದ್ರಶೇಖರ ಸ್ವಾಮೀಜಿ ಸಲಹೆ ಮೇರೆಗೆ ದುರ್ಗಾ ಪರಮೇಶ್ವರಿ ದೇವಸ್ಥಾನ ವತಿಯಿಂದ ಉಚಿತವಾಗಿ ಅಂಬ್ಯಲೆನ್ಸ್ ಸೇವೆ ಕಲ್ಪಿಸಲಾಗುವುದು. ಈ ನಾಡಿನಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಪೊಲೀಸರು, ಪತ್ರಕರ್ತರು, ವೈದ್ಯರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಯು.ಎಚ್ ಸಾತೇನಹಳ್ಳಿ ಮಾತನಾಡಿ, ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಅವರ ಸಾಮಾಜಿಕ ಚಿಂತನೆಯ ಸೇವಾ ಮನೋಭಾವ ಅಪಾರವಿದೆ. ಪಿಎಸ್‌ಐ ಈರಪ್ಪ ರಿತ್ತಿ, ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಬಸವೇಶ್ವರ ಟ್ರೇಡೆರ್ಸ್ ಮಾಲಿಕ ಸಿದ್ರಾಮ ಲಿಂಗಶೆಟ್ಟಿ, ಸಾಗರ ಲಿಂಗಶೆಟ್ಟಿ, ಪ್ರಕಾಶ ಜಿಡ್ಡಿಮನಜ ಇದ್ದರು.

Related