ಶಹಾಪುರ :ನಗರದಲ್ಲಿನ ದಿಗ್ಗಿ ಬೇಸ್ ಅಗಸಿಯ ಹತ್ತಿರ 6 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು, ಒಳ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಫೀಲ್ಟ್ರ್ ಬೇಡ್‌ನ ನೀರು ಶುದ್ಧೀಕರಣ ಘಟಕದಿಂದ ನಗರಲ್ಲಿರುವ ಓಎಸ್‌ಟಿ ಗಳಿಗೆ ನೀರು ಸಂಗ್ರಹಕ್ಕಾಗಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿವೆ.
ಕಾಮಗಾರಿಗಾಗಿ ಅಗೆದ ಮಣ್ಣನ್ನು ರಸ್ತೆಯುದ್ಧಕ್ಕೂ ಹಾಕಿದ್ದು, ವಾಹನ ಸವಾರರು ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ಟ್ಯಾಂಕ್‌ನ್ನು ನಿರ್ಮಿಸಿದ್ದು ಅಷ್ಟೇ, ಪೈಪ್‌ಲೈನï ಅಳವಡಿಸಲು ಅಗೆದ ಮಣ್ಣುನ್ನು ರಸ್ತೆಯ ಮಧ್ಯದಲ್ಲಿ ಹಾಕಲಾಗಿದೆ.
ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹೆಚ್ಚು ಸಮಯ ಬೇಕಾಗುತ್ತಲ್ಲದೇ ಟ್ರಾಫಿಕ್ ಸಮಸ್ಯೆ ಕೂಡಾ ಉಂಟಾಗುತ್ತಿದೆ. ಶಾಲೆ, ಕೊಚಿಂಗ್ ಸೆಂಟರ್, ದೇವಸ್ಥಾನ ಇದ್ದು, ಸಂಚರಿಸಲು ಕಷ್ಟಕರವಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದುಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಾಗಾರಿಯನ್ನು ಆದÀಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ನಗರ ಜನತೆ ಆಗ್ರಹಿಸಿದ್ದಾರೆ.
ಕೊಟ್;
ಕಾಮಗಾರಿಯು ನಡೆಯುತ್ತಿದ್ದು ಕಾರ್ಮಿಕರ ಕೊರತೆಯಿದೆ ಆದ್ದರಿಂದ ಸ್ವಲ್ಪ ದಿನದ ಮಟ್ಟಿಗೆ ಕಾಮಗಾರಿಯನ್ನು ಸ್ಥಗೀತಗೊಳಿಸಲಾಗಿದೆ.
ಎಇ ಶಂಕರಗೌಡ ಪಾಟೀಲ್