ಗದಗ: ರಾಜ್ಯ ಬಿಜೆಪಿಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದ್ದು ಇದರ ಮಧ್ಯೆ ಮಾಜಿ ಸಚಿವ ಶ್ರೀರಾಮುಲು ರಾಜ್ಯಾಧ್ಯಕ್ಷ ಹುದ್ದೆಗೆ ಕಣ್ಣಿಟ್ಟಿದಾರ ಎಂಬ ಮಾಹಿತಿ ತಿಳಿದು ಬಂದಿತ್ತು.
ಹೌದು, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಾರಿ ಗೊಂದಲ ಉಂಟಾಗುತ್ತಿದ್ದು ಹೈಕಮಾಂಡ್ ಯಾರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಗೊಂದಲದಲ್ಲಿದೆ
ಇದರ ಮಧ್ಯೆ ಈ ಹುದ್ದೆಗೆ ಮಾಜಿ ಸಚಿವ ಶ್ರೀರಾಮುಲು ಸಹ ಆಕಾಂಕ್ಷಿಯಾಗಿದ್ದರು. ಅಲ್ಲದೇ ರಾಜ್ಯಾಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಸಿದ್ದರು. ಆದ್ರೆ, ಅದು ಸಿಗುವುದು ಸಾಧ್ಯವಿಲ್ಲ ಎನ್ನುವುದು ಅರಿತುಕೊಂಡು ರೇಸ್ನಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ವತಃ ಶ್ರೀರಾಮುಲು ಅವರೇ ಮಾಧ್ಯಮಗ ಹೇಳಿಕೊಂಡು ಹತಾಶೆ ವ್ಯಕ್ತಪಡಿಸಿದ್ದಾರೆ.
ಗದಗನಲ್ಲಿಂದು ಸುದ್ದಿಗಾರದೊಂದಿಗೆ ಮಾತನಾಡಿದ ಶ್ರೀರಾಮುಲು, ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿವಾಗಿದ್ದೆ. ಪ್ರಯತ್ನ ಮಾಡಿದ್ದೇ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ. ಅದು ಆಗಲ್ಲ ಅಂತಾ ಗೊತ್ತಾಯಿತು. ಹೀಗಾಗಿ ಪ್ರಯತ್ನ ಕೈಬಿಟ್ಟೆ ಎಂದು ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.