ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಹೊಸ ಅಧ್ಯಾಯನವನ್ನ ಬರೆಯುವ ಹೊಸ ಹುರುಪಿನಲ್ಲಿ ಆರ್‌ಸಿಬಿ ತಂಡವು ಮುನ್ನುಗ್ಗುತಿತ್ತು. ಆದರೆ ನಿನ್ನೆ (ಬುಧುವಾರ ಮೇ22) ರಂದು ಆರ್‌ಸಿಬಿ ತಂಡಕ್ಕೆ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಹೌದು, ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್ ಆರ್ ಮತ್ತು ಆರ್‌ಸಿಬಿ ತಂಡ ಮುಖಾಮುಖಿಯಾಗಿದ್ದು, ಈ ಪಂದ್ಯಾವಳಿಯಲ್ಲಿ ಆರ್‌ಸಿಬಿ ಎಂಟು ವಿಕೆಟ್ ನಷ್ಟಕ್ಕೆ ಕೇವಲ 172 ರನ್ ಗಳಿಸುವ ಮೂಲಕ ಸೋಲನ್ನ ಅನುಭವಿಸಿದೆ. ಇದರಿಂದ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ.

ನಿನ್ನೆ ಆರ್‌ಸಿಬಿಗೆ  ತಂಡಕ್ಕೆ ಬ್ಯಾಡ್ ಲಕ್. ಆರ್‌ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ ಯಾಕೆಂದರೆ ನಿನ್ನೆ ಅಹಮದಾಬಾದ್ ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಂತಹ ಪಂದ್ಯದಲ್ಲಿ ಡೂ ಆರ್ ಡೈ ಪಂಧ್ಯ ಎನಿಸಿತ್ತು.

ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವನ್ನು ಸಾಧಿಸಿದ್ದರೆ ಕ್ವಾಲಿಫೈ ರೌಂಡಿಗೆ ಆರ್‌ಸಿಬಿ ತಂಡವು ಆಯ್ಕೆಯಾಗುತ್ತಿತ್ತು. ಆದರೆ ಆರ್ ಆರ್ ವಿರುದ್ಧ ಆರ್‌ಸಿಬಿ ಸೋಲುವ ಮೂಲಕ ಆರ್‌ಸಿಬಿಯ ಟ್ರೋಫಿ ಗೆಲ್ಲುವ ಕನಸು ಇದೀಗ ನುಚ್ಚುನೂರು ಆಗಿದೆ. 17 ಸೀಜನ್ ನಿಂದ ಕಾಯ್ತಾ ಇದ್ದ ಆರ್‌ಸಿಬಿ ಅಭಿಮಾನಿಗಳಿಗೆ ಬಾರಿಯೂ ಕೂಡ ಆರ್‌ಸಿಬಿ ತಂಡ ನಿರಾಸೆಯನ್ನು ಮೂಡಿಸಿದೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಎಂಟು ವಿಕೆಟ್ ನಷ್ಟಕ್ಕೆ 172 ರನ್ನಗಳಿಸಿತು. ನಿನ್ನ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೇವಲ 20 ರಿಂದ 30 ರನ್ನನ ಗಳಿಸಿದ್ರೆ ಗೆಲ್ಲುವ ಚಾನ್ಸಸ್ ಬಹಳ ಇತ್ತು ಎಂದು ಹೇಳಲಾಗ್ತಿದೆ.

ಇನ್ನು ನಿನ್ನೆ ಆರ್‌ಸಿಬಿ ತಂಡದ ದಿನವಾಗಿರಲಿಲ್ಲ, ಆರ್ ಆರ್ ತಂಡದ ದಿನವಾಗಿತ್ತು. ಹಾಗಾಗಿ ಬ್ಯಾಕ್ ಟು ಬ್ಯಾಕ್ ಆರ್ ಆರ್ ತಂಡ ಸೋತಿದ್ದರು ಕೂಡ ಇದೀಗ ನಿನ್ನೆ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಕ್ವಾಲಿಫೈ ರೌಂಡಿಗೆ ಅರ್ಹತೆಯನ್ನು ಪಡೆದುಕೊಂಡಿದೆ.Cricket, Sports, IPL, RCB

Related