ಪೂಜಾ ಹೆಗ್ಡೆ ಕಂಕಣ ಭಾಗ್ಯ ಕೂಡಿ ಬಂತಾ?

ಪೂಜಾ ಹೆಗ್ಡೆ ಕಂಕಣ ಭಾಗ್ಯ ಕೂಡಿ ಬಂತಾ?

ಮುಂಬೈ: ನಟಿ ಪೂಜಾ ಹೆಗಡೆ ಮೊದ ಮೊದಲು ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ತೆಲುಗು ಮತ್ತು ತಮಿಳು ಚಿತ್ರದಲ್ಲಿ ಅತಿ ಹೆಚ್ಚು ಬೇಡಿಕೆ ಉಳ್ಳ ನಟಿಯಾಗಿದ್ದರು. ಆದರೆ ಈಗ ಪೂಜೆ ಹೆಗಡೆಯವರಿಗೆ ಬೇಡಿಕೆ ಕಡಿಮೆಯಾಗಿದ್ದು ಬಹು ಬೇಡಿಕೆಯ ಸ್ಥಾನದಲ್ಲಿ ಶ್ರೀ ಲೀಲಾ ನಿಂತಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ದೊಡ್ಡ ದೊಡ್ಡ ನಟರೊಂದಿಗೆ ತೆರೆಯನ್ನು ಹಂಚಿಕೊಂಡ ಪೂಜಾ ಹೆಗಡೆ ಈಗ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಹೆಚ್ಚು ಸಿನಿಮಾಗಳು ಕೈಯಲ್ಲಿಲ್ಲದೆ ಖಾಲಿಯಿರುವ ಪೂಜಾ ಹೆಗ್ಡೆ ಖಾಸಗಿ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.

ಪೂಜಾ ಹೆಗ್ಡೆ ತಮ್ಮ ಬಾಯ್​ಫ್ರೆಂಡ್ ಜೊತೆ ಕೈ-ಕೈ ಹಿಡಿದು ಮುಂಬೈನ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಪೂಜಾ ಹೆಗ್ಡೆ, ನಟ ರೊಹಾನಾ ಮೆಹ್ರಾ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಈ ಜೋಡಿ ಮುಂಬೈನ ಬಾಂದ್ರಾನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಈ ಜೋಡಿ ಮುಂಬೈನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ.

ಈ ಜೋಡಿ ಕೋವಿಡ್ ಸಮಯದಿಂದಲೂ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಪ್ರೀತಿಯಷ್ಟು ಇಷ್ಟು ದಿನ ಗುಟ್ಟಾಗಿರಿಸಿದ್ದರು. ಇದೀಗ ಈ ಜೋಡಿ ವಿವಾಹವಾಗುತ್ತಿದ್ದು ಅದೇ ಕಾರಣ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಸೆಲೆಬ್ರಿಟಿ ಜೋಡಿಗಳು ಇತ್ತೀಚೆಗೆ ವಿವಾಹವಾಗುತ್ತಿದ್ದು, ಪೂಜಾ ಹಾಗೂ ರೋಹನ್ ಸಹ ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

 

Related