ಮಾನವೀಯತೆ ಮೆರೆದ ಧಾರವಾಡ ಪಿಎಸ್ಐ ಮಹೇಂದ್ರ ನಾಯಕ್

ಮಾನವೀಯತೆ ಮೆರೆದ ಧಾರವಾಡ ಪಿಎಸ್ಐ ಮಹೇಂದ್ರ ನಾಯಕ್

ಧಾರವಾಡ: ಕೊರೋನಾ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರವಹಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುವ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದೊಂದಿಗೆ ಮಾನವಿಯತೆ ಮೆರೆದಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮಹೇಂದ್ರ ನಾಯಕ್ ತಮ್ಮ ಸ್ವಂತ ಹಣದಲ್ಲಿ ಸುಮಾರು ರೂ.೨.೫೦ ಲಕ್ಷ ಮೌಲ್ಯದ ದಿನಸಿಯನ್ನುಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ.

ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾದ ಅವರು ಬಡತನದ ಹಿನ್ನಲೆಯಿಂದ ಬಂದಿದ್ದು, ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುತ್ತಿದ್ದಾರೆ.

ಠಾಣೆಯ ಸುಮಾರು ೩೫ ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಂಗಿ ಭಟ್ಟಿ ಕಾರ್ಮಿಕರು, ಕೂಲಿಕಾರ್ಮಿಕರು, ಮಕ್ಕಳಿಲ್ಲದ ವಯೊವೃದ್ದರ ಕುಟುಂಬಗಳನ್ನು ಗುರುತಿಸಿ, ತಮ್ಮದೆ ವಾಹನದಲ್ಲಿ ನೇರವಾಗಿ ಅಸಹಾಯಕರ ಮನೆಗೆ ತಲುಪಿಸಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರು ಪಿಎಸ್ಐ ಮಹೇಂದ್ರ ನಾಯಕ್ರ ಕಾರ್ಯ ಮೆಚ್ಚಿ, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು ೨೦ ಹಳ್ಳಿಯ ಬಡವ ಮತ್ತು ಅಸಹಾಯಕ ೩೦೦ ಕುಟುಂಬಗಳಿಗೆ ರವೆ, ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.

Related