ನದಿ, ನೀರಾವರಿ ಕಾಲುವೆ ಇದ್ದರೂ ರೈತರ ಜಮೀನಿಗಳಿಗೆ ನೀರಿಲ್ಲ

ನದಿ, ನೀರಾವರಿ ಕಾಲುವೆ ಇದ್ದರೂ ರೈತರ ಜಮೀನಿಗಳಿಗೆ ನೀರಿಲ್ಲ

ಮುದ್ದೇಬಿಹಾಳ : ತಾಲ್ಲೂಕಿನ ಕಪನೂರ, ಹುನಕುಂಟೆ ಗ್ರಾಮದ ರೈತರ ಒಟ್ಟು 1111.69 ಎಕರೆಗಳಷ್ಟು ಜಮೀನುಗಳಿಗೆ ಕೃ.ಭಾ.ಜ.ನಿ.ನಿ ಆಲಮಟ್ಟಿ ಎಡದಂಡೆ ಕಾಲುವೆಯ ವ್ಯಾಪ್ತಿಯೂಳಗೆ ನೀರುಣಿಸುಲು ಗ್ರಾಮದ ರೈತರು ಮಂಗಳವಾರ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

2014ರಲ್ಲಿ ಸಂಗಪ್ಪ ಪೂಜಾರಿ ಅವರ ಹೊಲದಿಂದ ಅಂದಾಜು 2.ಕಿಮೀ ಕಾಲುವೆಯನ್ನು ನಿರ್ಮಿಸಲಾಗಿದ್ದರು. ಸದರಿ ಕಾಲುವೆ ಹೊಲಗಳ ಭೂ ಮಟ್ಟದಿಂದ 1.5 ಮೀಟರ್ ಕೆಳಗೆ ತೆಗ್ಗಿನಲ್ಲಿ ನಿರ್ಮಿಸಿದ ಕಾರಣ ಕಾಲುವೆಯಿಂದ ನೀರು ನಮ್ಮ ಜಮೀನುಗಳಿಗೆ ಒಂದು ಹನಿ ನೀರನ್ನು ಬಳಸಿಕೊಳ್ಳಲು ಆಗುತ್ತಿಲ್ಲ ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ 8 ವರ್ಷಗಳಿಂದ ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡಿದರು.

ದಪ್ಪ ಚರ್ಮದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಕಾಲುವೆಯಲ್ಲಿ ಬರುವ ನದಿಯ ನೀರು ಪುನಃ ನದಿಯನ್ನು ಸೇರುತ್ತಿದೆ, ನೀರಾವರಿ ಹೆಸರಿಗೆ ಮಾತ್ರ ಆಗಿದೆ. ನಾವುಗಳು ಒಣ ಬೇಸಾಯಕ್ಕೆ ಅವಲಂಬನೆಯನ್ನು ಮಾಡಿ ಬದಕುತ್ತಿದ್ದೇವೆ ಎಂದು ಗ್ರಾಮದ ಹಿರಿಯ ರೈತ ರುದ್ರಸ್ವಾಮಿ ತಹಶೀಲ್ದಾರ್ ಬಿ.ಎಸ್ . ಕಡಕಭಾವಿ ಅವರ ಗಮನಕ್ಕೆ ತಂದರು.

ನಮ್ಮ ಸಮಸ್ಯೆ ಬಗೆ ಹರಿಸುವಂತೆ ಕಳೆದ 8 ವರ್ಷಗಳಿಂದ ಮನವಿಗೆ ಅಧಿಕಾರಿಗಳು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಕೃಷಿಯನ್ನು ನಂಬಿ ಬದುಕುವ ನಮಗೆ ಇದರಿಂದ ಅನ್ಯಾಯವಾಗಿದೆ. ಅದಕ್ಕೆ ನಮಗೆ ನ್ಯಾಯ ಒದಗಿಸಿ ಕಾಲುವೆಯ ನೀರು ಜಮೀನಿನಲ್ಲಿ ಹರಿಯುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು 8 ವರ್ಷದಿಂದ ನಮ್ಮ ಸಮಸ್ಯೆ ಕುರಿತು ಬಗೆಹರಿಸದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಹಣಮಂತ ಚಲವಾದಿ, ಪರಶುರಾಮ ಮಾದರ, ದೊಡ್ಡಯ್ಯ ಹಿರೇಮಠ, ಕೀಡಯ್ಯ ಹಿರೇಮಠ, ಅಖಂಡೇಶ್ವರಯ್ಯ ಹಿರೇಮಠ, ನಾಗಪ್ಪ ತಳವಾರ, ಸಿದ್ದಯ್ಯ ಹಿರೇಮಠ, ಮುತ್ತು ಮಾದರ, ಬಸವರಾಜ ಬಡಕುರಿ ಉಪಸ್ಥಿತರಿದ್ದರು.

Related