ಪತ್ರಕರ್ತರ ಬೇಡಿಕೆ: ಪಾಲಿಕೆಗೆ ಮನವಿ

  • In State
  • March 17, 2020
  • 346 Views
ಪತ್ರಕರ್ತರ ಬೇಡಿಕೆ: ಪಾಲಿಕೆಗೆ ಮನವಿ

ಬೆಂಗಳೂರು, ಮಾ. 17: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪತ್ರಕರ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಸುವಂತೆ ಕೋರಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಬೆಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಅವರಿಗೆ ಹಲವು ಬೇಡಿಕೆಗಳ ಮನವಿ ಪತ್ರ ನೀಡಲಾಯಿತು.

ಕಳೆದ 5 ತಿಂಗಳಲ್ಲಿ7 ಮಂದಿ ಪತ್ರಕರ್ತರು ಅನಾರೋಗ್ಯ ಹಾಗೂ ಇನ್ನಿತರ ಕಾರಣಗಳಿಂದಾಗಿ ಮರಣ ಹೊಂದಿರುವ ಮೃತ ಪತ್ರಕರ್ತರ ಕುಟುಂಬಗಳಿಗೆ ನೆರವು ಪ್ರಕಟಿಸುವಂತೆ ಕೋರಿರುವ ಯೂನಿಯನ್ ಪ್ರಸಕ್ತ ಜಾರಿಯಲ್ಲಿರುವ ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಮುಂದುವರಿಸುವAತೆ ಮನವಿ ಮಾಡಿದ್ದಾರೆ.

ಕಳೆದ ಬಾರಿಯ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಕೊರತೆಯಿಂದಾಗಿ ಹಲವು ಪತ್ರಕರ್ತರು ಚಿಕಿತ್ಸಾ ವೆಚ್ಚದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಒಂದು ಕೋಟಿ ರೂ.ಗೆ ಚಿಕಿತ್ಸಾ ವೆಚ್ಚ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಪಾಲಿಕೆ ಆವರಣದಲ್ಲಿ ಮಾದ್ಯಮ ಕೇಂದ್ರ ಆರಂಭಿಸಲು 2 ಕೋಟಿ ರೂ.ಮೀಸಲಿಡಲಾಗಿತ್ತಾದರೂ ಈವರೆಗೂ ಮಾದ್ಯಮ ಕೆಂದ್ರ ಆರಂಭಗೊಂಡಿಲ್ಲ, ಮೀಸಲಿಟ್ಟಿರುವ ಹಣ ಕೇವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸಾದ್ಯವಾಗಲಿದ್ದು, ಮಾದ್ಯಮ ಕೇಂದ್ರಕ್ಕೆ ಅಗತ್ಯವಿರುವ ಪೀಠೋಪಕರಣ, ಗಣಕ ಯಂತ್ರಗಳ ಖರೀದಿಗೆ 2 ಕೋಟಿ ಅನುದಾನ ಮೀಸಲಿಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ನೀಡುವ ನೂರಕ್ಕೂ ಹೆಚ್ಚು  ಕಾಲೇಜುಗಳಿಂದ ಪ್ರತಿ ವರ್ಷ 5000 ಸಾವಿರ ವಿದ್ಯಾರ್ಥಿಗಳು ಪದವಿದರರಾಗಿ ಪತ್ರಿಕಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇಂತಹ ನಿರೂದ್ಯೋಗ ಯುವಕ ಯುವತಿಯರಿಗೆ ಪಾಲಿಕೆ ಕೆಲವು ಸಂಸ್ಥೆಗಳ ಮೂಲಕ ತರಬೇತಿ ನೀಡುವಂತಾಗಬೇಕಿದೆ. ತರಬೇತಿ ಪಡೆದ ಯುವಕ ಯುವತಿಯರನ್ನು ಪಾಲಿಕೆಯ ವಲಯ ಕಚೇರಿಗಳಿಗೆ ಪಿಆರ್‌ಒಗಳಾಗಿ ನಿಯೋಜಿಸುವಂತೆ ಬೇಡಿಕೆ ಇಡಲಾಗಿದೆ. ಪತ್ರಕರ್ತರ ಮಾದ್ಯಮ ತರಬೇತಿ ಯೋಜನೆಗೆ 2 ಕೋಟಿ ರೂ ಮೀಸಲಿಡುವಂತೆ ಆಯುಕ್ತರಿಗೆ ನೀಡಿರುವ ಮನವಿ ಪತ್ರದಲ್ಲಿ   ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ತಿಳಿಸಿದೆ.

ಹಿರಿಯ ಪತ್ರಕರ್ತ ಶಿವಕುಮಾರ್ ಬೆಳ್ಳಿತೆಟ್ಟೆ, ಪ್ರಧಾನ ಕಾರ್ಯದರ್ಶಿ ನಕಿರೆಕಂಟಿ ಸ್ವಾಮಿ ಸೇರಿದಂತೆ ಇತರ ಪತ್ರಕರ್ತರು ಹಾಜರಿದ್ದರು.

Related