ಹೋರಾಟ ಸಮಿತಿ ರಚಿಸಲು ನಿರ್ಧಾರ!

ಹೋರಾಟ ಸಮಿತಿ ರಚಿಸಲು ನಿರ್ಧಾರ!

ಸೇಡಂ : ಸೇಡಂನ ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಮಠಾಧೀಶರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇಡಂ ಜಿಲ್ಲಾ ರಚನಾ ಸಮಿತಿ ರಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಸೇಡಂನ ಮಠಾಧೀಶರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಕೀಯ ಗಣ್ಯರು, ಹಿರಿಯ ಮುಖಂಡರು, ಸಾಹಿತಿಗಳು, ಸಂಘಟನೆಗಳು ಪ್ರಮುಖರು, ವ್ಯಾಪಾರಸ್ಥರು, ರೈತರು ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡು ಜಿಲ್ಲಾ ರಚನೆಗೆ ಬೇಕಾದ ಸಲಹೆ ಹಾಗೂ ಅಭಿಪ್ರಾಯ ಹಂಚಿಕೊಂಡರು.

ಕೆಲವರು ಕಾನೂನಾತ್ಮಕವಾಗಿ ಹೋರಾಟದ ಕುರಿತು ನಿರ್ಧರಿಸಿದರೆ ಕೆಲವರು ಇದಕ್ಕೆ ಸುಮ್ಮನಿರುವುದು ಸರಿಯಲ್ಲ ಹೋರಾಟವೇ ಮುಖ್ಯ. ಹೋರಾಟದಿಂದ ಮಾಡಿದ್ದಲ್ಲಿ ಎಲ್ಲವೂ ನಮಗೆ ಸಿಗುತ್ತವೆ ಎಂಬುವುದರ ಕುರಿತು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಮುಖಂಡ ಮುಕ್ರಂಖಾನ್, ಚಂದ್ರಶೇಖರರೆಡ್ಡಿ ದೇಶಮುಖ, ಮಹಿಪಾಲರೆಡ್ಡಿ ಮುನ್ನೂರ, ಶಿವಕುಮಾರ ನಿಡಗುಂದಾ, ಶರಣು ಮಹಾಗಾಂವ, ನಾಗರೆಡ್ಡಿ ಪಾಟೀಲ ಇದ್ದರು.

Related