ಸ್ವಯಂ ಬಂದ್‌ಗೆ ನಿರ್ಧಾರ

ಸ್ವಯಂ ಬಂದ್‌ಗೆ ನಿರ್ಧಾರ

ಕೊಪ್ಪಳ : ಕೋವಿಡ್-19 ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆಯು ನಾಳೆಯಿಂದ 15 ದಿನಗಳ ಕಾಲ ಮಧ್ಯಾಹ್ನ 2 ಗಂಟೆಯಿಂದ ಸ್ವಯಂ ಬಂದ್ ಮಾಡಲು ನಿರ್ಧಾರ ಮಾಡಿದೆ.

ಸೋಂಕು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದೆ. ಆದರೂ ಜಿಲ್ಲೆಯಲ್ಲಿ 139 ಜನರಿಗೆ ಸೋಂಕು ತಗುಲಿದೆ.

ಈ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಸಭೆಯು ನಗರದ ಎಲ್ಲ ವರ್ತಕರ, ವ್ಯಾಪಾರಸ್ಥರ ಸಭೆ ಕರೆದು ಚರ್ಚೆ ನಡೆಸಿದರು. ವ್ಯಾಪಾರಸ್ಥರೂ ಸಹಿತ ಪ್ರತಿ ದಿನ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆ ವರೆಗೂ ವ್ಯಾಪಾರ ವಹಿವಾಟು ನಡೆಸಲಿದ್ದೇವೆ.

ಸರ್ಕಾರದ ನಿಯಮಾವಳಿ ಜೊತೆಗೆ ಕೊಪ್ಪಳ ನಗರ ಸಭೆ ವ್ಯಾಪ್ತಿಯ ಎಲ್ಲ ಅಂಗಡಿ ಮುಂಗಟ್ಟು ಬಂದ್ ಆಗಲಿವೆ. ಎಪಿಎಂಸಿ, ಅಬಕಾರಿ ವ್ಯಾಪ್ತಿಯ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಡಿಸಿ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Related