ಡಿ.13 ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ: ಉಗ್ರಪ್ಪ!

ಡಿ.13 ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ: ಉಗ್ರಪ್ಪ!

ಬೆಂಗಳೂರು: ನಿನ್ನೆ ದೆಹಲಿಗೆ ಸಂಸತ್ ಭವನದಲ್ಲಿ ನಡೆದಿರುವ ಘಟನೆ ಇಡೀ ದೇಶದಲ್ಲಿಯೇ ಇದು ಕರಾಳ ದಿನವಾಗಿದೆ. ಭದ್ರತಾ ಲೋಕದಿಂದ ಈ ಘಟನೆ ಆಗಿದೆಯೋ ಅಥವಾ ಬೇರೆ ಉದ್ದೇಶದಿಂದ ಈ ಘಟನೆ ನಡೆದಿದೆಯೋ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಎಸ್ ವಿ ಉಗ್ರಪ್ಪ ಅವರು ಕಿಡಿಕಾರಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು, ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ನಿನ್ನೆ ನಡೆದಿರುವ ಘಟನೆ ಇಡೀ ಇತಿಹಾಸದಲ್ಲೇ ಹಿಂದೆಂದೂ ನಡೆಯದಿರುವ ಘಟನೆಯಾಗಿದ್ದು ಇದರ ಬಗ್ಗೆ ಹೆಚ್ಚಿನ ತನಿಖೆಯಾಗಬೇಕೆಂದು ಹೇಳಿದರು.

ಸಂಸತ್ ಭವನ ರಾಜ್ಯಸಭೆ ಹಾಗೂ ಲೋಕಸಭಾ ಸ್ಪೀಕರ್ ಕಂಟ್ರೋಲ್‌ ನಲ್ಲಿ ಇರುತ್ತದೆ ಸಂಸತ್ ಭವನದ ಹೊರಗೆ ನಡೆದ ಘಟನೆ ಕೂಡ ಡಿಸೆಂಬರ್ 13 ಕಠಿಣ ಶಬ್ದಗಳಲ್ಲಿ ಈ ಘಟನೆ ಖಂಡಿಸುವೆ ಎಂದು ಹೇಳಿದರು.

ಈ ರೀತಿಯ ಘಟನೆ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡ್ತಿದೆ. ಸಂಸತ್ ಭವನದ ರಕ್ಷಣೆ ಸಾಧ್ಯವಾಗದ ಸ್ಥಿತಿ ಬಂದೊದಗಿದೆ ಹಾಗಾದರೆ ರಾಷ್ಟ್ರದ ಜನರ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡ್ತಿದೆ. ನಾನು ಸಂಸತ್ ಸದಸ್ಯರಾಗಿ ಪಾಸ್ ಗಳನ್ನ ನೀಡಿದ್ದೇನೆ. ಅವರ ಕ್ಷೇತ್ರದವರಾಗಿದ್ರೆ, ಪರಿಚಯ ಇದ್ರೆ ಪಾಸ್ ಕೊಡಲಾಗುತ್ತದೆ. ಮೈಸೂರಿನವರು ಮೈಸೂರಿನರಿಗೆ ಪಾಸ್ ಕೊಟ್ಟಿದ್ದಾರೆ. ಇವರ ಬ್ಯಾಗ್ ರೌಂಡ್ ಸಂಸದರಿಗೆ ಗೊತ್ತಿರಬೇಕು ಈ ಘಟನೆಯ ಜವಾಬ್ದಾರಿಯನ್ನು ಸಂಸದರು ಹೊರಬೇಕು ಸಂಸದರ ಪಕ್ಷ ಸ್ಪಷ್ಟಣೆ ನೀಡಬೇಕು ಎಂದು ಕಿಡಿಕಾರಿದರು.

Related