ಬಾಂಗ್ಲಾದ ಶಿಫ್ಟಿಂಗ್ ಕಂಟೈನರ್ ಡಿಪೋದಲ್ಲಿನ ಸ್ಫೋಟಕ್ಕೆ ಕನಿಷ್ಠ 49 ಮಂದಿ ಸಾವು, 300ಕ್ಕೂ ಹೆಚ್ಚು ಮಂದಿ ಗಾಯ..!

  • In Crime
  • June 6, 2022
  • 208 Views
ಬಾಂಗ್ಲಾದ ಶಿಫ್ಟಿಂಗ್ ಕಂಟೈನರ್ ಡಿಪೋದಲ್ಲಿನ ಸ್ಫೋಟಕ್ಕೆ ಕನಿಷ್ಠ 49 ಮಂದಿ ಸಾವು, 300ಕ್ಕೂ ಹೆಚ್ಚು ಮಂದಿ ಗಾಯ..!

ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿರುವ ಶಿಪ್ಪಿಂಗ್ ಕಂಟೈನರ್ ಡಿಪೋದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೀತಾಕುಂದ ಪ್ರದೇಶದ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 300 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪೊಲೀಸ್ ಹೊರಠಾಣೆಯಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿ ನೂರುಲ್ ಆಲಂ ಪ್ರಕಾರ, ರಾಸಾಯನಿಕ ಕ್ರಿಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯು ಸೂಚಿಸಿದೆ.

ರೆಡ್ ಕ್ರೆಸೆಂಟ್ ಯೂತ್ ಚಿತ್ತಗಾಂಗ್ನ ಆರೋಗ್ಯ ಮತ್ತು ಸೇವಾ ವಿಭಾಗದ ಮುಖ್ಯಸ್ಥ ಇಸ್ತಾಕುಲ್ ಇಸ್ಲಾಂ, “ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು” ಎಂದು ಹೇಳಿದರು.

Related